ವಯನಾಡಿನಲ್ಲಿ ಉಂಗುರ ನೋಡಿ ಪುತ್ರಿಯ ಗುರುತು ಪತ್ತೆ
ದೇವರು ನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ವೇಳೆ ನಾಪತ್ತೆಯಾದ ಅನೇಕರನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಮಣ್ಣಿನಡಿಯಲ್ಲಿ ಹೂತು ಹೋದ ತಮ್ಮವರಿಗಾಗಿ ಹುಡುಕಾಟ ಮುಂದುವರಿದಿದೆ.
ಈ ನಡುವೆ ನೀರಿನಲ್ಲಿ ಕೊಚ್ಚಿ ಹೋದ ಮಗಳ ಮೃತ ದೇಹ ಸಿಕ್ಕದ ತಂದೆ ಸಿಕ್ಕ ಮಗಳ ಅರ್ಧ ಕೈಗೆ ಅಂತ್ಯಸಂಸ್ಕಾರ ನಡೆಸಿದ ಮನಕಲಕುವ ಘಟನೆ ವಯನಾಡಿನಲ್ಲಿ ನಡೆದಿದೆ.
5 ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಲ್ಲಿ ಪತ್ನಿ, ಮಗಳು, ಅಳಿಯ ಮೊಮ್ಮಗನನ್ನು ಕಳೆದುಕೊಂಡ ತಂದೆ ರಾಮಸ್ವಾಮಿ ತಮ್ಮವರಿಗಾಗಿ ಹುಡುಕಾಟದ ಜಾಗವಿಲ್ಲ. ಯಾವುದಾದರೊಂದು ನಿರಾಶ್ರಿತರ ಕೇಂದ್ರದಲ್ಲಿ ನನ್ನವರ ದನಿ ಕೇಳಿಸಿಬಹುದೆಂದು ಕೊರಳುದ್ದ ಮಾಡಿದ್ದರು. ಆದರೆ ಆ ಅದೃಷ್ಟ ಅವರಿಗೆ ಇರಲಿಲ್ಲ.
ಕೊನೆಗೆ ಚಲಿಯಾರ್ ನದಿಯ ದಡದಲ್ಲಾದರೂ ಕುಟುಂಬಸ್ಥರ ಕುರುಹು ಇರಬಹುದೆಂದು ಶೋಧ ಪ್ರಾರಂಭಿಸಿದ್ದರು. ಈ ನಡುವೆ ಚಲಿಯಾರ್ ನದಿಯಲ್ಲಿ ಮಹಿಳೆಯೊಬ್ಬರ ಒಂಟಿ ಕೈಯೊಂದು ಸಿಕ್ಕಿತ್ತು. ಅದರ ಒಂದು ಬೆರಳಲ್ಲಿ ಇದ್ದ ಉಂಗುರ ನೋಡಿದ ತಂದೆ ಅದು ನನ್ನ ಮಗಳ ಕೈ ಎಂದು ಕಣ್ಣೀರಾದ್ರು.
ಪುತ್ರಿಯ ದೇಹ ಸಿಗದ ಕಾರಣ ಒಂಟಿ ಕೈಯನ್ನೇ ಚಿತೆಯ ಮೇಲಿಟ್ಟು ಅಂತ್ಯಕ್ರಿಯೆ ಮುಗಿಸಿದ್ದಾರೆ.
ಭೂ ಕುಸಿತ ಸಂಭವಿಸಿದ ಸಂದರ್ಭದಲ್ಲಿ ರಾಮಸ್ವಾಮಿಯವರ ಮನೆಯಲ್ಲಿದ್ದ ಮಗಳು ಜೀಶಾ, ಅಳಿಯ ಮುರುಗನ್, ಮೊಮ್ಮಗ ಅಕ್ಷಯ್ ಮತ್ತು ಪತ್ನಿ ತೆಂಕಮ್ಮ ನಾಪತ್ತೆಯಾಗಿದ್ದರು.ಅದು ಹೋಗೋ ರಾಮಸ್ವಾಮಿ ಬದುಕುಳಿದಿದ್ದರು.
ಈ ಪೈಕಿ ಅಕ್ಷಯ್ ಶವ ಮಾತ್ರ ಸಿಕ್ಕಿದ್ದು, ಉಳಿದವರ ಸುಳಿವು ಸಿಕ್ಕಿಲ್ಲ. ಈ ನಡುವೆ ರಕ್ಷಣಾ ತಂಡಗಳಿಗೆ ಚಲಿಯಾರ್ ನದಿಯಲ್ಲಿ ಸಿಕ್ಕ ಒಂಟಿ ಕೈಯ ಬೆರಳಿನಲ್ಲಿದ್ದ ಉಂಗುರದಲ್ಲಿ ಮುರುಗನ್ ಎಂದು ಬರೆಯಲಾಗಿತ್ತು. ಈ ಮೂಲಕ ರಾಮಸ್ವಾಮಿ ತಮ್ಮ ಮಗಳ ಕೈಯನ್ನು ಗುರುತಿಸಿದ್ದಾರೆ.