ಕೆಪಿಸಿಸಿ ಅನೇಕಲ್ ವಿಭಾಗದ ಸೋಷಿಯಲ್ ಮೀಡಿಯಾ ವಿಂಗ್ ಕೂಡಾ ಈ ದೂರಿನಲ್ಲಿ ಸೇರಿದೆ (vinay guruji)
ಬೆಂಗಳೂರು : ದತ್ತಾಶ್ರಮದ ಅವಧೂತ ವಿನಯ ಗುರೂಜಿ (vinay guruji) ತಮ್ಮ ತೇಜೋವಧೆಯಾಗಿದೆ ಎಂದು ಟ್ರೋಲ್ ಪೇಜ್ ಹಾಗೂ ಕೆಲ ಯೂ ಟ್ಯೂಬ್ ವಾಹಿನಿಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ತಮ್ಮ PRO ಮೂಲಕ ವಿನಯ್ ಗುರೂಜಿ ದೂರು ಸಲ್ಲಿಸಿದ್ದಾರೆ.
ಈ ದೂರಿನಲ್ಲಿ ಕೆಪಿಸಿಸಿಯ ಅನೇಕಲ್ ವಿಭಾಗದ ಸೋಷಿಯಲ್ ಮೀಡಿಯಾ ವಿಂಗ್ ಸೇರಿದಂತೆ 22 ಟ್ರೋಲ್ ಪೇಜ್ ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ತಲೆಯ ಮೇಲೆ ಕಾಲಿಡುವ ದೃಶ್ಯವನ್ನು ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ, ಇದರಿಂದ ಸ್ವಾಮೀಜಿಯವರ (vinay guruji) ತೇಜೋವಧೆಯಾಗುತ್ತಿದೆ, ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : Bengaluru terror : ತಿಲಕ್ ನಗರದಲ್ಲಿ ಬಂಧಿತ ಅಖ್ತರ್ಗೆ ಅಲ್ಖೈದಾ ನಂಟು..!
ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲ್ ಪೇಜ್ ಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಇದೇ ದೂರಿನಲ್ಲಿ ಬನಶಂಕರಿ ಪೊಲೀಸರಿಗೆ ಮನವಿ ಮಾಡಲಾಗಿದೆ.
ಮಂಗಳೂರಿನಲ್ಲಿ ಪಬ್ ಕಿರಿಕ್ : ಘಟನೆ ಬಗ್ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದೇನು
ಮಂಗಳೂರಿನ ಲಿಪ್ ಲಾಕ್ ಪ್ರಕರಣದ ಬಳಿಕ ಸೋಮವಾರ ರಾತ್ರಿ ಪಬ್ ದಾಳಿಯಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಪಬ್ ದಾಳಿಯನ್ನು ಪೊಲೀಸರು ಅಲ್ಲಗಳೆದಿದ್ದು, ಅಂತಹ ಘಟನೆ ನಡೆದಿಲ್ಲ ಅಂದಿದ್ದಾರೆ
ಮಂಗಳೂರು : ಸೋಮವಾರ ರಾತ್ರಿ ಮಂಗಳೂರಿನ ಬಲ್ಮಠದಲ್ಲಿರುವ ರಿಸೈಕಲ್ ರೆಸ್ಟೋರೆಂಟ್ ಮೇಲೆ ದಾಳಿ ನಡೆದಿದೆ ಎಂದು ಸುದ್ದಿಯಾಗಿತ್ತು. ಮತ್ತೆ ಮಂಗಳೂರಿನಲ್ಲಿ ಪಬ್ ದಾಳಿ ಅನ್ನುವ ವದಂತಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಆದರೆ ಇದೀಗ ಎಲ್ಲಾ ಗಾಳಿ ಸುದ್ದಿಗಳನ್ನು ನಿರಾಕರಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಂಗಳೂರಿನಲ್ಲಿ ಪಬ್ ಮೇಲೆ ದಾಳಿಯಾಗಿಲ್ಲ ಅಂದಿದ್ದಾರೆ.
ಬಲ್ಮಠ ರಸ್ತೆಯಲ್ಲಿರುವ ರಿಸೈಕಲ್ ರೆಸ್ಟೋರೆಂಟ್ ಗೆ ಬೆಳಗ್ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಸಂಘಟನೆಯೊಂದಕ್ಕೆ ಸೇರಿದ ಹುಡುಗರು ಬಂದಿದ್ದಾರೆ. ಈ ವೇಳೆ ಬೌನ್ಸರ್ ದಿನೇಶ್ ಅನ್ನುವವರನ್ನು ಭೇಟಿಯಾಗಿ ನಿಮ್ಮ ಬಾರ್ ಒಳಗಡೆ ಮೈನರ್ ಹುಡುಗ ಹುಡುಗಿ ಇದ್ದಾರೆ ಅಂದಿದ್ದಾರೆ. ಈ ವಿಷಯವನ್ನು ದಿನೇಶ್ ಮ್ಯಾನೇಜರ್ ಬಳಿ ಹೇಳಿದ್ದಾರೆ.
ಬಳಿಕ ಒಳಗಡೆ ಹೋಗಿ ಪರಿಶೀಲನೆ ನಡೆಸಿದ ಮ್ಯಾನೇಜರ್, ಸ್ಥಳೀಯ ಕಾಲೇಜಿನ ಕೆಲ ವಿದ್ಯಾರ್ಥಿಗಳು ಇರುವುದನ್ನು ಗುರುತಿಸಿದ್ದಾರೆ ಮತ್ತು ಅವರನ್ನು ಹೊರಗೆ ಹೋಗಲು ಹೇಳಿದ್ದಾರೆ. ಬೌನ್ಸರ್ ಕೊಟ್ಟಿರುವ ಮಾಹಿತಿಯಂತೆ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ, ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ.
ಈ ಘಟನೆ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೊರಗಿನ ವ್ಯಕ್ತಿಗಳು ಬಂದು ಐಡಿ, ಲೈಸೆನ್ಸ್ ಕೇಳಲು ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತ ಅಂದಿದ್ದಾರೆ.
ಇನ್ನು ಮೊನ್ನೆ ನಡೆದ ಅಶ್ಲೀಲ ವಿಡಿಯೋ ಪ್ರಕರಣಕ್ಕೂ ಈ ಘಟನೆಗೂ ಸಂಬಂಧವಿಲ್ಲ ಅಂದಿರುವ ಪೊಲೀಸ್ ಆಯುಕ್ತರು, ಅಂತಿಮ ಪದವಿ ವಿದ್ಯಾರ್ಥಿಗಳು ಪಬ್ ಗೆ ಬಂದಿರುವ ಮಾಹಿತಿ ಪ್ರಾಥಮಿಕ ಹಂತದಲ್ಲಿ ಲಭ್ಯವಾಗಿದೆ. ಈ ಪಬ್ ನಿಯಮದ ಪ್ರಕಾರ 21 ವರ್ಷದವರು ಪಬ್ ಗೆ ಬರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರವೇ ಮುಂದಿನ ಕ್ರಮಕ್ಕೆ ಹೆಜ್ಜೆ ಇಡಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.
Discussion about this post