ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಂಪುಟ ವಿಸ್ತರಣೆ ಬುಧವಾರ ನಡೆಯುವ ಸಾಧ್ಯತೆಗಳಿದೆ. ಈಗಾಗಲೇ ಅಳೆದು ತೂಗಿರುವ ಹೈಕಮಾಂಡ್ ಯಾರೆಲ್ಲಾ ಮಂತ್ರಿಯಾಗಬೇಕು ಎಂದು ನಿರ್ಧರಿಸಿದ್ದಾರೆ. ಆರ್ ಎಸ್ ಎಸ್ ನಾಯಕರ ಕಡೆಯಿಂದ ಪಟ್ಟಿಗೆ ಹಸಿರು ನಿಶಾನೆಯೊಂದು ಬಾಕಿ ಉಳಿದಿದ್ದು, ಅದು ಸಿಕ್ರೆ ಬೊಮ್ಮಾಯಿ ತಂಡ ರಾಜ್ಯದ ಅಭಿವೃದ್ಧಿಗೆ ಸಿದ್ದವಾಗುತ್ತದೆ.
ಈ ನಡುವೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯಲು ಯಡಿಯೂರಪ್ಪ ಪುತ್ರ ವಿಜಯೇಂದ್ರ ಇನ್ನಿಲ್ಲದಂತೆ ಸರ್ಕಸ್ ಮಾಡುತ್ತಿರುವುದು ಗುಪ್ತವಾಗಿ ಉಳಿದಿಲ್ಲ. ಜೊತೆಗೆ ಯಡಿಯೂರಪ್ಪ ಅವರು ಕೂಡಾ ಮಗನನ್ನು ಮಂತ್ರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಈವರೆಗೆ ನಡೆದ ಉಪಚುನಾವಣೆಯ ಗೆಲುವಿನಲ್ಲಿ ವಿಜಯೇಂದ್ರ ಪಾತ್ರ ದೊಡ್ಡದು, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ವಿಜಯೇಂದ್ರ ಮಂತ್ರಿಯಾದರೆ ಅನುಕೂಲ ಅನ್ನುವುದು ಹೈಕಮಾಂಡ್ ಮುಂದಿಟ್ಟಿರುವ ವಾದ.
ಆದರೆ ವಿಜಯೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ಧಪಡಿಸಿಕೊಂಡು ಹೋಗಿದ್ದ ಸಂಭಾವ್ಯ ಸಚಿವರ ಪಟ್ಟಿ ನೋಡಿದ ಸಂತೋಷ್ ಸಿಡಿಮಿಡಿಗೊಂಡಿದ್ದು,ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ನೇರವಾಗಿ ಹೇಳಿದ್ದಾರಂತೆ.
ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಪಕ್ಷಕ್ಕೆ ಡ್ಯಾಮೇಜ್ ಹಾಗುತ್ತೆ. ಈಗಾಗಲೇ ವಿಜಯೇಂದ್ರ ಮೇಲೆ ಭ್ರಷ್ಟಾಚಾರ ಆರೋಪವಿದೆ. ಈ ಸಮಯದಲ್ಲಿ ಇವರನ್ನು ಕ್ಯಾಬಿನೆಟ್ ಗೆ ಸೇರಿಸಿಕೊಂಡರೆ ತಪ್ಪಾಗುತ್ತದೆ. ಮೊದಲು ಚುನಾವಣೆಯಲ್ಲಿ ಗೆದ್ದು ಬರಲಿ. ನಂತರ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ನೋಡೋಣ ಅಂದಿದ್ದಾರೆ ಅನ್ನುವುದು ಈಗಿನ ಸುದ್ದಿ.
ಯಡಿಯೂರಪ್ಪ ಮಾಜಿಯಾದರೂ ಈಗ್ಲೂ ಅವರ ಮನೆ ಪವರ್ ಸೆಂಟರ್ ಆಗಿಯೇ ಉಳಿದಿದೆ. ಜೊತೆಗೆ ವಿಜಯೇಂದ್ರ ಸಂಪುಟಕ್ಕೆ ಸೇರಿಸಿಕೊಂಡ್ರೆ ಕಷ್ಟವಾಗಲಿದೆ. ಹೀಗಾಗಿ ವಿಜಯೇಂದ್ರ ಸಂಪುಟದಲ್ಲಿ ಇರೋದು ಬೇಡ ಎಂದು ಸಂತೋಷ್ ಹೇಳಿದ್ದಾರಂತೆ.
Discussion about this post