varthur Santhosh ಹುಲಿ ಉಗುರು ಪ್ರಕರಣ ಇದೀಗ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿದೆ
Bigg Boss Kannadaದ ಮನೆಯಲ್ಲಿ ವರ್ತೂರು ( Varthur) ಧರಿಸಿದ ಹುಲಿ ಉಗುರಿನ ( tiger claw ) ಚೈನ್ ಇದೀಗ ಮತ್ತಷ್ಟು ಸೆಲೆಬ್ರೆಟಿಗಳ ಕುತ್ತಿಗೆಯನ್ನು ಬಿಗಿ ಮಾಡಲಾರಂಭಿಸಿದೆ. ಈಗಾಗಲೇ ಹುಲಿ ಉಗುರಿನ ಪೆಂಡೆಂಟ್ ( tiger nail pendant ) ಧರಿಸಿ ಫೋಸ್ ಕೊಟ್ಟವರೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ. ಇನ್ನು ತಡವಾಗಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ವರ್ತೂರುಗೊಂದು ನ್ಯಾಯ ಸೆಲೆಬ್ರೆಟಿಗಳಿಗೆ ಮತ್ತೊಂದು ನ್ಯಾಯ ಅನ್ನುವಂತೆ ವರ್ತಿಸುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿದೆ.
ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದ ಕರೆದುಕೊಂಡ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೋ, ವಿಡಿಯೋಗಳನ್ನು ಆಧರಿಸಿ ಹುಲಿ ಉಗುರಿನ ಪೆಂಡೆಂಟ್ ಹಾಕಿದವರ ಮನೆ ಬಾಗಿಲು ತಟ್ಟಲಾರಂಭಿಸಿದ್ದಾರೆ ಅಧಿಕಾರಿಗಳು.
ಇದನ್ನೂ ಓದಿ : ಪುತ್ತೂರಿನ ಪಿಲಿರಂಗ್ ಹುಲಿವೇಷ ಸ್ಪರ್ಧೆಯ ತೀರ್ಪುಗಾರರ ಪಟ್ಟದಲ್ಲಿ ಕಿಶೋರ್ ಅಮನ್
ಈ ನಡುವೆ ಅರಣ್ಯಾಧಿಕಾರಿಗಳ ಕಾರ್ಯವೈಖರಿಗೆ ವ್ಯಾಪಕ ಟೀಕೆ ಕೇಳಿ ಬಂದಿದ್ದು, ವರ್ತೂರು ಸಂತೋಷ್ ಅವರನ್ನು ಬಂಧಿಸಲು ವಿಳಂಭ ಮಾಡದ ಅಧಿಕಾರಿಗಳು ನಟ ದರ್ಶನ್, ನಟ ಜಗ್ಗೇಶ್ ಬಗ್ಗೆ ಅದ್ಯಾಕೆ ಸಾಫ್ಟ್ ಕಾರ್ನರ್ ತಳೆದಿದ್ದಾರೆ ಅನ್ನುವ ಪ್ರಶ್ನೆಗಳು ಎದ್ದಿದೆ. ಸಂತೋಷ್ ಕುತ್ತಿಗೆಯಲ್ಲಿ ಸರ ಇರುವುದನ್ನು ಕಂಡು ಕ್ರಮ ಕೈಗೊಂಡವರಿಗೆ ದರ್ಶನ್ ಮತ್ತು ಜಗ್ಗೇಶ್ ಮೇಲೆ ಕ್ರಮ ಯಾಕೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ಸಾಮಾಜಿಕ ಸಂಘಟನೆಗಳು Darshan Tiger Claw Pendant ಪ್ರಕರಣದಲ್ಲಿ ಇವತ್ತೆ ಅರೆಸ್ಟ್ ಮಾಡಿ, ಇಲ್ದಿದ್ರೆ ನಿಮ್ಮ ವಿರುದ್ಧವೇ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿವೆ. ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಈ ಸಂಬಂಧ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ತಕ್ಷಣ ನಟ ದರ್ಶನ್ ಅವರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಆಗ್ರಹಿಸಿದೆ.
Discussion about this post