ನವದೆಹಲಿ : ಕೊರೋನಾ ಲಸಿಕೆ ಪಡೆದ ಅಮೆರಿಕಾದ ಮೂವರು ಸಂಸದರಿಗೆ ಕೊರೋನಾ ಸೋಂಕು ತಗುಲಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಇದು ಅಮೆರಿಕಾದಲ್ಲಿ ಮತ್ತೆ ಡೆಲ್ಟಾ ರೂಪಾಂತರಿ ವೈರಾಣು ಅಬ್ಬರಿಸಲಿದೆ ಅನ್ನುವುದರ ಮುನ್ಸೂಚನೆ ಅನ್ನಲಾಗಿದೆ.
ಕಳೆದ ವಾರ ರಾತ್ರಿ ಪೂರ್ತಿ ನಡೆದ ಸಂಸತ್ ಕಲಾಪದಲ್ಲಿ ಬಹುತೇಕ ಸಂಸದರೂ ಪಾಲ್ಗೊಂಡಿದ್ದರು. ಇದೀಗ ಕಲಾಪದಲ್ಲಿ ಪಾಲ್ಗೊಂಡಿದ್ದ ಮೂವರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ, ಇತರ ಸಂಸದರಿಗೂ ಸೋಂಕು ಹರಡಿರುವ ಸಾಧ್ಯತೆಗಳಿದೆ ಅನ್ನಲಾಗಿದೆ.
ಸೋಂಕು ಕಾಣಿಸಿಕೊಂಡಿರುವ ಸಂಸದರು ಈಗಾಗಲೇ ಕೊರೋನಾ ಲಸಿಕೆಯನ್ನು ಪಡೆದುಕೊಂಡಿದ್ದು, ಯಾವುದೇ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ನಡೆಸಿಕೊಂಡ ನಂತರ ಕೊರೊನಾ ಸೋಂಕು ಇರುವು ಪತ್ತೆಯಾಗಿದೆ. ಹೀಗಾಗಿ ಲಸಿಕೆ ಪಡೆದಿರುವುದರಿಂದ ಸೋಂಕಿದ್ದರೂ ಬೇಗ ಗುಣಮುಖರಾಗಲು ಸಾಧ್ಯ ಅನ್ನುವುದು ಗೊತ್ತಾಗಿದೆ.
ಈ ನಡುವೆ ಅಮೆರಿಕಾದಲ್ಲಿ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಳ್ಳಲು ಡೆಲ್ಟಾ ರೂಪಾಂತರಿ ವೈರಸ್ ಕಾರಣ ಎನ್ನಲಾಗಿದ್ದು ಹೀಗಾಗಿ ಮತ್ತೊಮ್ಮೆ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಲು ಅಮೆರಿಕಾ ಆರೋಗ್ಯ ಇಲಾಖೆ ಮುಂದಾಗಿದೆ.
Discussion about this post