ಯೂನಿಯನ್ ಬ್ಯಾಂಕ್ ( union bank) ಇದೀಗ ಗ್ರಾಹಕರ ನಂಬಿಕೆ ಗಳಿಸೋದು ಹೇಗೆ
ಹಾವೇರಿ : ಯೂನಿಯನ್ ಬ್ಯಾಂಕ್ನಲ್ಲಿದ್ದ ( union bank Kurubagonda) ಖಾತೆದಾರರ ಕೋಟಿ ಕೋಟಿ ಹಣ, ಚಿನ್ನಾಭರಣಗಳು ನಾಪತ್ತೆಯಾಗಿರುವ ಪ್ರಕರಣ ಕುರಿತಂತೆ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿಯನ್ನು ಹಾವೇರಿ ಸಿ.ಇ.ಎನ್. ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಸಹಾಯಕ ಮ್ಯಾನೇಜರ್ ಅರ್ಚನಾ ಬೆಟಗೇರಿ ( archana betageri ), ದಿನಗೂಲಿ ನೌಕರ ಶಾಂತಪ್ಪ ಯಲಗಚ್ಚ, ಬಿಸಿನೆಸ್ ಕರೆಸ್ಪಾಂಡೆಂಟ್ ಪ್ರವೀಣ ಚಿಕ್ಕಲಿಂಗದಹಳ್ಳಿ ವಿರುದ್ಧ ಬ್ರಾಂಚ್ ಮ್ಯಾನೇಜರ್ ರವಿರಾಜ್ ದೂರು ನೀಡಿದ್ದರು.
ಕುರುಬಗೊಂಡ ಶಾಖೆಯ ಯೂನಿಯನ್ ಬ್ಯಾಂಕ್ ನಲ್ಲಿ ಅರ್ಚನಾ ಬೆಟಿಗೇರಿ ಕಳೆದ ಎರಡುವರೆ ವರ್ಷಗಳಿಂದ ಪ್ರಭಾರ ವ್ಯವಸ್ಥಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ವಂತ ಲಾಭಕ್ಕಾಗಿ ಗ್ರಾಹಕರಿಗೆ ಸಂಬಂಧಿಸಿದ 1,12,78,920ರೂ. ನಗದು ಮತ್ತು 49,47,792ರೂ. ಮೌಲ್ಯದ ಚಿನ್ನಾಭರಣ ಸೇರಿ ಒಟ್ಟು 1.62ರೂ. ಕೋಟಿಯನ್ನ ವಂಚಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿತ್ತು.
ಪ್ರಕರಣದ ವಿವರ
ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಯೂನಿಯನ್ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಚನಾ ಗ್ರಾಹಕರಿಗೆ ಸಂಬಂಧಿಸಿದ 1,12,78,920 ರೂಪಾಯಿ ನಗದು ಹಾಗೂ 49,47,792 ಮೌಲ್ಯದ ಚಿನ್ನಾಭರಣ ಹೀಗೆ ಒಟ್ಟು 1 ಕೋಟಿ 62 ಲಕ್ಷ ರೂಪಾಯಿ ವಂಚನೆ ಮಾಡಿದ್ದರು.
ಇದನ್ನೂ ಓದಿ : ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ
ಬ್ಯಾಂಕ್ ಗೆ ದುಡ್ಡು ಕಟ್ಟಲು ಬಂದ 9 ಗ್ರಾಹಕರಿಂದ 81,45,420 ರೂಪಾಯಿ ಪಡೆದುಕೊಂಡು, ನಗದು ರಸೀದಿಗಳಿಗೆ ಹಾಗೂ ಡೆಪಾಸಿಟ್ ಸರ್ಟಿಫಿಕೆಟ್ ಗೆ ಸಹಿ ಸೀಲು ಮಾಡಿ ಕೊಟ್ಟಿದ್ದರು. ಆದರೆ ಅದನ್ನು ಖಾತೆಗಳಿಗೆ ಜಮಾ ಮಾಡದೆ ಅರ್ಚನಾ ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. 13 ಮಂದಿ ಗ್ರಾಹಕರು ಸಾಲಕ್ಕಾಗಿ ಬ್ಯಾಂಕ್ ನಲ್ಲಿ ಚಿನ್ನಾಭರಣ ಒತ್ತೆ ಇಟ್ಟು ಸಾಲ ಪಡೆದಿದ್ದರು. ಆ ಚಿನ್ನಾಭರಣಗಳನ್ನು ಕೂಡಾ ಅರ್ಚನಾ ದೋಚಿರುವ ಆರೋಪ ಕೇಳಿ ಬಂದಿದೆ.
ಮುತ್ತಣ್ಣ ಅನ್ನುವವರು ಚಿನ್ನಾಭರಣಗಳನ್ನು ಕಳೆದುಕೊಂಡಿದ್ದು, ಶಿವಕುಮಾರ್ ಎನ್ನುವವರು 10 ಲಕ್ಷ ಹಣ ಕಳಕೊಂಡಿದ್ದಾರೆ. ಚಂದ್ರು ಎನ್ನುವವರು 6 ಲಕ್ಷ ಹಣ ಕಳಕೊಂಡಿದ್ದಾರೆ. ಭೂಮಿಕಾ ಸ್ತ್ರೀ ಶಕ್ತಿ ಸಂಘದ ಲತಾ, ಸ್ಥಳೀಯ ಮೊಹಮ್ಮಗೌಸ್ ಹೀಗೆ ಹಣ ಕಳೆದುಕೊಂಡವರ ಪಟ್ಟಿ ಬೆಳೆದಿತ್ತು.
ಅಷ್ಟು ಮಾತ್ರವಲ್ಲದೆ ಕುರುಬಗೊಂಡ ಬ್ಯಾಂಕ್ ಆವರಣದಲ್ಲಿರುವ ಎಟಿಎಂ ಕೇಂದ್ರದಿಂದ 31,35,500 ರೂಪಾಯಿ ಹಣವನ್ನು ಪ್ರವೀಣ್ ಮತ್ತು ಶಾಂತಪ್ಪ ಅನ್ನುವವರೊಂದಿಗೆ ಸೇರಿ ದೋಚಿದ್ದಾರೆ ಅನ್ನಲಾಗಿದೆ.
Bank assistant manager arrested in Haveri district for fraud : CEN Police arrest Union Bank of Kurubagonda’s assistant branch manager in Haveri district for defrauding customers of ₹1.62 crore in cash
Discussion about this post