ಆತಂಕದಲ್ಲಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು
ತುಂಗಭದ್ರಾ ಜಲಾಶಯದ ಅಣೆಕಟ್ಟು ಪ್ರದೇಶ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎರಡನೇ ಬೆಳೆಗೆ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ.
ಇದರಿಂದ 2ನೇ ಬೆಳೆಗೆ ನೀರು ಬಿಡುತ್ತಾರೋ ಇಲ್ವೋ ಎಂದು ಆತಂಕದಲ್ಲಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು, ತುಂಗಭದ್ರಾ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ಎಡದಂಡೆ ವಿಜಯನಗರ ಕಾಲುವೆ, ರಾಯಬಸಣ್ಣ ಕಾಲುವೆ, ಕೆಳಮಟ್ಟದ ಕಾಲುವೆ, ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಬಿಡಲು ನಿರ್ಧಾರ ಮಾಡಿದ್ದೇವೆ.
ನಿಗದಿತ ದಿನಾಂಕಗಳಂದು ಎಲ್ಲ ಕಾಲುವೆಗಳಲ್ಲಿ ನೀರು ಬಿಡುತ್ತೇವೆ. 97 ಟಿಎಂಸಿ ನೀರು ತುಂಗಾಭದ್ರ ಜಲಾಶಯದಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಎಡದಂತೆ ಕಾಲುವೆಗೆ ಯಾವಾಗಿನಿಂದ ಎಷ್ಟು ನೀರು?
- ಡಿಸೆಂಬರ್ 1ರಿಂದ ಡಿ.15ರವರೆಗೆ 1500 ಕ್ಯೂಸೆಕ್ಸ್.
- ಡಿ.15ರಿಂದ ಡಿ.31ರವರೆಗೆ 2ಸಾವಿರ ಕ್ಯೂಸೆಕ್ಸ್.
- 2025ರ ಜನವರಿ 1ರಿಂದ ಜನವರಿಗೆ 31ರ ವರೆಗೆ 3800 ಕ್ಯೂಸೆಕ್ಸ್
- .
- ಫೆಬ್ರವರಿ 01ರಿಂದ ಫೆ.28ರ ವರೆಗೆ 3800 ಕ್ಯೂಸೆಕ್ಸ್.
- ಮಾರ್ಚ್ 1ರಿಂದ ಮಾ.31ರವರೆಗೆ 3800 ಕ್ಯೂಸೆಕ್ಸ್ ನೀರು ಹರಿಸಲು ತೀರ್ಮಾನವಾಗಿದೆ.
- ಹಾಗೇ ಮಾರ್ಚ್ 1ರಿಂದ ಮಾ.10ರವರೆಗೆ 1650 ಕ್ಯೂಸೆಕ್ಸ್ ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.