Tulsi Vivah : When is Tulsi Vivah 2023? Date shubh muhurat rituals significance
ಸಾಲು ಸಾಲು ದೀಪಗಳ ಹಬ್ಬ ದೀಪಾವಳಿಯ ನಂತ್ರ ಬರುವುದೇ ಕಿರು ದೀಪಾವಳಿ ಅದುವೇ ತುಳಸಿ ಪೂಜೆ . ಹಿಂದೂಗಳ ದಿನಚರಿಯಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ಪ್ರತೀ ನಿತ್ಯ ತುಳಸಿ ಕಟ್ಟೆಗೆ ನಮಸ್ಕಾರ, ನಿತ್ಯ ತುಳಸಿ ಕಟ್ಟೆಗೆ ದೀಪ ಇಡುವ ( Tulsi Vivah ) ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ್ರೆ ದೀಪಾವಳಿ ನಂತ್ರ ಬರುವ ತುಳಸಿ ಪೂಜೆ ಮತ್ತಷ್ಟು ಸಂಭ್ರಮದ ಹಬ್ಬ. ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ತುಳಸಿ ಪೂಜೆಯೂ ಒಂದಾಗಿದೆ. ಹಿಂದೂ ಸಂಪ್ರದಾಯದಂತೆ ಪ್ರತೀ ವರ್ಷ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ : ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು
ತುಳಸಿ ವಿವಾಹವು ಹಿಂದೂ ಧರ್ಮದಲ್ಲಿ ಧಾರ್ಮಿಕ ಮಹತ್ವವನ್ನು ಹೊಂದಿದೆ.ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ವಿವಾಹ ನಡೆಯುತ್ತದೆ. ಈ ವರ್ಷ, ತುಳಸಿ ವಿವಾಹವನ್ನು ನವೆಂಬರ್ 24, 2023 ರಂದು ನಡೆಸಲಾಗುತ್ತದೆ.
ತುಳಸಿ ವಿವಾಹ 2023: ದಿನಾಂಕ ಮತ್ತು ಸಮಯ
ದ್ವಾದಶಿ ತಿಥಿ ಆರಂಭ – ನವೆಂಬರ್ 23, 2023 – 09:01
ದ್ವಾದಶಿ ತಿಥಿ ಕೊನೆ – ನವೆಂಬರ್ 24, 2023 – 07:06 ಸಂಜೆ
ತುಳಸಿ ವಿವಾಹ 2023: ಶುಭ ಮುಹೂರ್ತ
ನವೆಂಬರ್ 24, 2023 – 06:50 ಬೆಳಗ್ಗೆ ರಿಂದ 10:48 ಬೆಳಗ್ಗೆ ವರೆಗೆ
ನವೆಂಬರ್ 24, 2023 – 12:07 ಮಧ್ಯಾಹ್ನ ರಿಂದ 01:26 ಮಧ್ಯಾಹ್ನ
Discussion about this post