ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516ರೈಲಿನ ಎಂಜಿನ್ ನಲ್ಲಿ ಇಂಧನ ಸೋರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲ್ಲಿಸಲಾಗಿತ್ತು.
ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್ ಹಾಗೂ ಕೊಡಗಳನ್ನು ಹಿಡಿದು ಡೀಸೆಲ್ ತುಂಬಿಸಿಕೊಳ್ಳಲು ಮುಗಿ ಬಿದ್ದರು.
ಹುಬ್ಬಳ್ಳಿ-ಬೆಂಗಳೂರು ಪ್ಯಾಸೆಂಬರ್ ರೈಲಿನ ಇಂಜಿನ್ ನಲ್ಲಿ ಇಂಧನ ಸೋರಿಕೆಯ ಪರಿಣಾಮ ಬೆಂಗಳೂರಿಗೆ ಹೊರಡುವ ರೈಲು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗೆ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.
ಈ ವೇಳೆ ಡೀಸೆಲ್ ತುಂಬಿಸಿಕೊಳ್ಳಲು ಜನರು ಪಾತ್ರೆ, ಬಕೆಟ್ ಹಿಡಿದು ಮುಗಿ ಬಿದ್ದ ಪರಿಣಾಮ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ರೈಲಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯ್ತು.
Discussion about this post