ವಿಜಯಪುರ : ರೈಲು ಡಿಕ್ಕಿಯಾಗಿ ( train accident ) 96 ಕುರಿಗಳು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಕೊಡಗಿ ಮಧ್ಯೆ ನಡೆದಿದೆ. ಗದಗ ವಿಜಯಪುರ ರೈಲ್ವೆ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು, ಕುರಿಗಳ ಮಾಲೀಕ ಇದೀಗ ಕಂಗಲಾಗಿದ್ದಾರೆ.
ಶನಿವಾರ ಸಂಜೆ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದ ಕಾರಣ ಕುರಿಗಾರರು ಸೇತುವೆ ಕೆಳಗಡೆ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ಈ ವೇಳೆ ರೈಲೊಂದು ಸಂಚರಿಸಿದ ನಂತರ ಕುರಿಗಳನ್ನು ಹಳಿ ದಾಟಿಸಲು ಮುಂದಾಗಿದ್ದಾರೆ. ಈ ವೇಳೆ ಮತ್ತೊಂದು ಹಳಿಯಲ್ಲಿ ಗದಗ – ಮುಂಬೈ ರೈಲು ಆಗಮಿಸಿದ ಕಾರಣ ( train accident ) ಈ ದುರ್ಘಟನೆ ಸಂಭವಿಸಿದೆ.
ರೈಲಿನ ವೇಗದ ರಭಸಕ್ಕೆ ಕುರಿಗಳ ದೇಹ ಛಿದ್ರ ಛಿದ್ರವಾಗಿದ್ದು ಹಳಿ ತುಂಬಾ ಕುರಿಗಳ ಮೃತ ದೇಹವೇ ಕಾಣಿಸುತ್ತಿತ್ತು. ಘಟನೆಯಲ್ಲಿ ಕೊಲ್ಹಾರ ತಾಲೂಕಿನ ಕಳೆವಾಡ ಗ್ರಾಮದ ಶಿವಪ್ಪ ಕಲ್ಲಪ್ಪ ಮೂಕನ್ನವರ 25 ಕುರಿ, ಚಂದ್ರ ಖರ್ಗೆಯವರಿಗೆ ಸೇರಿದ 43 ಕುರಿ ಹಾಗೂ ಶೇಖಪ್ಪ ಮೂಕನವರ ಮತ್ತು ಕಾಡಸಿದ್ದ ಮಲ್ಲಪ್ಪ ಅವರ 28 ಕುರಿಗಳು ಮೃತಪಟ್ಟಿದೆ.
ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ದಂಪತಿ ಬಂಧನ
ಬೆಂಗಳೂರು ಬಳಿಕ ಮಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಸದ್ದು ಮಾಡುತ್ತಿದೆ. ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಆರೋಪಿಗಳು ಮಾರಾಟ ಜಾಲ ವಿಸ್ತರಿಸಿಕೊಂಡಿದ್ದಾರೆ ಇವರೆಷ್ಟು ಪ್ರಭಾವಶಾಲಿಗಳಾಗಿರಬೇಕು
ಮಂಗಳೂರು : ನಗರದ ಎಂ.ಜಿ.ರಸ್ತೆ, ಕೆಪಿಟಿ, ಕದ್ರಿ, ಜೆಪ್ಪು, ಬಜಾಲ್ ಪರಿಸರದ ವಿದ್ಯಾಸಂಸ್ಥೆಗಳ ಪರಿಸರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿಖ್ಯಾತ್ ಯಾನೆ ವಿಕ್ಕಿ ಬಪ್ಪಾಲ್ (28) ಮತ್ತು ಆತನ ಪತ್ನಿ ಅಂಜನಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 22 ಸಾವಿರ ರೂಪಾಯಿ ಮೌಲ್ಯದ 2,200 ಕೆಜಿ ಗಾಂಜಾ, 1,500 ರೂಪಾಯಿ ನಗದು, ಮೊಬೈಲ್, ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ದಂಪತಿ ಈ ಹಿಂದೆಯೇ ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ವಿಖ್ಯಾತ್ ವಿರುದ್ಧ ಮಂಗಳೂರು ದಕ್ಷಿಣ, ಉತ್ತರ, ಬರ್ಕೆ, ಉರ್ವ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದೆ. ಎಲ್ಲವೂ ಕೂಡಾ ಕೊಲೆ ಯತ್ನ, ಜೀವ ಬೆದರಿಕೆ, ಕರ್ತವ್ಯ ಅಡ್ಡಿ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ್ದು. ಇನ್ನು ಅಂಜನಾ ವಿರುದ್ಧ ಮಂಗಳೂರು ದಕ್ಷಿಣ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ದಂಪತಿಯ ಮಾದಕ ವಸ್ತು ಜಾಲದ ಬಗ್ಗೆ ಮಾಹಿತಿ ಸಿಸಿಬಿ ಪೊಲೀಸರು ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ಐ ರಾಜೇಂದ್ರ ಅವರ ನೇತೃತ್ವದಲ್ಲಿ ಕಾವೂರು ಶಂಕರನಗರದಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ.
Discussion about this post