ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಒಂದು ಹೊಸ ಕಾನೂನು : ಡಿ.ಕೆ. ಶಿವಕುಮಾರ
ರಾಜ್ಯದ ಕಾವೇರಿ, ಕೃಷ್ಣಾ, ಹೇಮಾವತಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಲ್ಲಿ ಕೊನೆಯ ಹಂತದವರೆಗೆ ಅಂದರೆ ಟೈಲೆಂಡ್ ವರೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಒಂದು ಹೊಸ ಕಾನೂನು ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿಧಾನಸಭೆಯಲ್ಲಿಂದು ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಅವರು, ಎತ್ತಿನಹೊಳೆ ಸೇರಿದಂತೆ ರಾಜ್ಯದ ಹಲವು ಯೋಜನೆಗಳಲ್ಲಿ ಕೊನೆಯ ಹಂತದವರೆಗೆ ರೈತರಿಗೆ ನೀರು ಲಭ್ಯವಾಗುತ್ತಿಲ್ಲ. ಇದು ಬಹುತೇಕ ಎಲ್ಲ ನೀರಾವರಿ ಯೋಜನೆಗಳಲ್ಲೂ ಕಂಡುಬರುತ್ತಿದೆ. ಕಾಲುವೆಯಲ್ಲಿ ನೀರು ಬಿಟ್ಟಾಗ ರೈತರು ಅಕ್ರಮವಾಗಿ ಪಂಪ್ ಸೆಟ್ ಗಳನ್ನು ಹಾಕಿ ಆ ನೀರನ್ನು ತಮ್ಮ ಹೊಲಗಳಿಗೆ ಹರಿಸಿಕೊಳ್ಳುತ್ತಾರೆ. ಹಾಗಾಗಿ ನೀರು ಕೊನೆಯ ಹಂತ ತಲುಪುವುದೇ ಇಲ್ಲ.
ಇದರಿಂದ ಯೋಜನೆಗಳು ಸಾಕಷ್ಟು ರೈತರಿಗೆ ಪ್ರಯೋಜನವಾಗುತ್ತಿಲ್ಲ ಎಂದರು. ಇದನ್ನು ತಡೆಯುವ ಸಲುವಾಗಿ ಮುಂದಿನ ವಾರ ಹೊಸ ಮಸೂದೆಯನ್ನು ತರಲಾಗುವುದು. ಆ ಬಗ್ಗೆ ವ್ಯಾಪಕ ಚರ್ಚೆಯ ನಂತರ ಅದಕ್ಕೆ ಅನುಮೋದನೆ ಪಡೆದು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗವುದು. ಆ ಮೂಲಕ ನೀರಾವರಿ ಯೋಜನೆಗಳ ಪ್ರಯೋಜನ ಎಲ್ಲ ರೈತರಿಗೆ ದೊರಕುವಂತೆ ನೋಡಿಕೊಳ್ಳಲಾಗುವುದು ಎಂದರು.
ಈ ನಡುವೆ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್, ಕಾವೇರಿ ನದಿ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಿದೆ. ಹಾರಂಗಿಗೆ 12ಸಾವಿರದ 820 ಕ್ಯೂಸೆಕ್, ಹೇಮಾವತಿಗೆ 14 ಸಾವಿರದ 23, ಕೆಆರ್ ಎಸ್ ಗೆ 25 ಸಾವಿರದ 933 , ಕಬಿನಿಗೆ 22 ಸಾವಿರದ 840 ಕ್ಯೂಸೆಕ್ ನೀರಿನ ಹರಿವಿದೆ.
ಸುಪ್ರೀಂ ಕೋರ್ಟ್ ನ ತೀರ್ಪಿನ ಪ್ರಕಾರ ಬಿಳಿಗುಂಡ್ಲುವಿಗೆ ಈ ವೇಳೆಗೆ 40 ಟಿಎಂಸಿ ನೀರು ಹೋಗಬೇಕಾಗಿತ್ತು. ಈವರೆಗೆ 6 ಟಿಎಂಸಿ ಮಾತ್ರ ಹೋಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Deputy Chief Minister and Minister for Major and Medium Irrigation D.K. Shivakumar on Tuesday informed the Legislative Assembly that 1.5 tmcft of water is flowing daily to Biligundlu reservoir on the border of Karnataka and Tamil Nadu owing to good rain in the State.
Discussion about this post