ಆಹಾರವೊಂದು ಸರಿಯಾಗಿದ್ದರೆ ಹಲವು ಕಾಯಿಲೆಗಳಿಂದ ಮುಕ್ತ ಜೀವನ ನಡೆಸಬಹುದಾಗಿದೆ. ಇನ್ನು ಹಿತ ಮಿತವಾದ ಆಹಾರ ದೇಹಾರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನು ಕೆಲವು ಆಹಾರಗಳು ಲೈಂಗಿಕ ಶಕ್ತಿಯನ್ನು ವೃದ್ಧಿಸುವ ಗುಣ ಹೊಂದಿದೆ. ಈ ಪೈಕಿ ಕೆಲವೊಂದು ಆಹಾರಗಳನ್ನು ನಮಗೆ ಅರಿವಿಲ್ಲದೆ ನಾವು ಸೇವಿಸುತ್ತೇವೆ. ಯಾರಿಗೆ ದಾಂಪತ್ಯ ಕರ್ತವ್ಯದಲ್ಲಿ ನಿರಾಸಕ್ತಿ ಇರುತ್ತದೋ ಅವರು ಈ ಆಹಾರಗಳನ್ನು ಸೇವಿಸಿದರೆ ವಿಜೃಂಭಿಸಬಹುದಂತೆ.
ಬೆಳ್ಳುಳ್ಳಿ
ಬೆಳ್ಳುಳ್ಳಿ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇದೇ ಬೆಳ್ಳುಳ್ಳಿ ದೊಡ್ಡ ಮಟ್ಟದ ಕಾಮೋತ್ತೇಜಕವಾಗಿದ್ದು, ಲೈಂಗಿಕ ಪ್ರದರ್ಶನ ವೃದ್ಧಿಸಲು ಸಹಕಾರಿ, ಕಾಮದ ಬಗ್ಗೆ ನಿರಾಸಕ್ತಿ ಹೊಂದಿರುವವರು ಬೆಳ್ಳುಳ್ಳಿ ಸೇವಿಸಿದರೆ ಹಾಸಿಗೆಯಲ್ಲಿ ಬೆಸ್ಟ್ ಫರ್ಪಾರ್ ಆಗಬಹುದಂತೆ. ಎರಡು ಬೆಳ್ಳುಳ್ಳಿ ಎಸಲುಗಳನ್ನು ಜಜ್ಜಿ, ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸರಸ ವೀರರಾಗಬಹುದಂತೆ. ಇನ್ನು ಬೆಳ್ಳುಳ್ಳಿ ಕಾಮೋತ್ತೇಜಕ ಮಾತ್ರವಲ್ಲದೆ ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ಕಡಿಮೆ ಮಾಡುವ ತಾಕತ್ತು ಹೊಂದಿದೆ.
ಈರುಳ್ಳಿ
ಈರುಳ್ಳಿ ಕೇವಲ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಸೆಕ್ಸ್ ರುಚಿಯನ್ನು ಕೂಡಾ ಹೆಚ್ಚಿಸುತ್ತದೆಯಂತೆ. ಈರುಳ್ಳಿ ಸೇವನೆ ಮಾಡಿದರೆ ಕಾಮಾಸಕ್ತಿ ವೃದ್ಧಿಸುವುದಲ್ಲದೆ ಸಂತಾನೋತ್ಪತ್ತಿ ಅಂಗಾಂಗಗಳನ್ನು ಬಲಪಡಿಸುತ್ತದೆ. ನಿಮಿರು ದೌರ್ಬಲ್ಯ ಹೊಂದಿರುವವರಿಗೆ ಇದು ಲಾಭಕಾರಿ. ಅದರಲ್ಲೂ ಬಿಳಿ ಈರುಳ್ಳಿ ಸಿಕ್ರೆ ಖಂಡಿತಾ ಬಿಡಬೇಡಿ. ಊಟದ ವೇಳೆ ಬಿಳಿ ಈರುಳ್ಳಿ ಸೇವನೆ ಮಾಡಿ. ಸಲಾಡ್ ಅಥವಾ ಬೇರೆ ರೂಪದಲ್ಲಿ ಇದನ್ನು ಬಳಸಬಹುದು.
ನುಗ್ಗೆಕಾಯಿ
ನುಗ್ಗೆಕಾಯಿ ನಾಟಿ ವಯಾಗ್ರ ಅನ್ನುವುದನ್ನು ಎಲ್ಲರಿಗೆ ಗೊತ್ತು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸದಿದ್ರೆ ಪ್ರಯೋಜನವಿಲ್ಲ. ಪುರುಷರು ಹಾಗೂ ಮಹಿಳೆಯರಿಗೆ ಇದು ಸಹಕಾರಿ ಆಗಿದೆ. ನುಗ್ಗೆಕಾಯಿ ಮಾತ್ರವಲ್ಲದೆ, ಇದರ ತೊಗಟೆ ಕೂಡಾ ಸರಸದ ಸಮರಕ್ಕೆ ತಾಕತ್ತು ನೀಡುತ್ತದೆ. ಕೇವಲ ಕಾಮೋತ್ತೇಜಕ ಮಾತ್ರವಲ್ಲದೆ ಬಂಜೆತನ, ಶೀಘ್ರ ಸ್ಖಲನ ಹಾಗೂ ವೀರ್ಯದ ಕೊರತೆಯನ್ನು ಸಮಸ್ಯೆಯನ್ನು ನೀಗಿಸುತ್ತದೆ. 15 ಗ್ರಾಂ ನುಗ್ಗೆಕಾಯಿ ಎಲೆಯನ್ನು 250 ಮಿ.ಲೀ.ಹಾಲಿಗೆ ಹಾಕಿ ಕುದಿಸಿ. ನುಗ್ಗೆಕಾಯಿ ತೊಗಟೆ ಬಳಸುವುದಾದ್ರೆ, ತೊಗಟೆಯನ್ನು ಒಣಗಿಸಿ, ಹುಡಿ ಮಾಡಿ. 120 ಗ್ರಾಂ ಹುಡಿಯನ್ನು ಅರ್ಧ ಲೀಟರ್ ನೀರಿಗೆ ಹಾಕಿ ಅರ್ಧ ಗಂಟೆ ಕುದಿಸಿ. ನೀರು ಒಂದು ಲೋಟಕ್ಕೆ ಬರುತ್ತಿದ್ದಂತೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸಬೇಕು, ಮೂರು ತಿಂಗಳ ಕಾಲ ದಿನದಲ್ಲಿ ಮೂರು ಸಲ ಇದನ್ನೇ ಸೇವಿಸಿದ ಮೇಲೆ ನೀವು ಸಾಧಕರಾಗಬಹುದು.
Discussion about this post