ನೆರೆ ಪರಿಹಾರ ವಿಳಂಭ ಇದೀಗ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ಆಗಿರುವ ಅನ್ಯಾಯ ಕುರಿತಂತೆ ಮಾತನಾಡುವವರಿಗೆ ದೇಶ ದ್ರೋಹಿ ಅನ್ನುವ ಪಟ್ಟ ಕಟ್ಟಲಾಗುತ್ತಿದೆ. ಇನ್ನು ಪರಿಹಾರ ಕೊಡಿಸಿ ಸ್ವಾಮಿ ಅಂದ ನಾಯಕರಿಗೆ ಬಿಜೆಪಿ ಶೋಕಾಸ್ ನೋಟಿಸ್ ಕೊಡುತ್ತಿದೆ.
ಈ ನಡುವೆ ಬೆಂಗಳೂರಿನಲ್ಲಿ ಮಾಧ್ಯಮದವರು ನೆರೆ ಪರಿಹಾರ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನಿಸಿದರೆ, ನೆರೆ ಪರಿಹಾರದ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅಂದಿದ್ದಾರೆ.
ಜಯನಗರದಲ್ಲಿ ನಡೆದ ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದಾದ ಅವರು, ನಾನು ನೆರೆ ಪರಿಹಾರದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಜೊತೆ ಫೋನಿನಲ್ಲಿ ಮಾತಾಡಿದ್ದೇವೆ. ಮತ್ತೆ ಅ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪಲಾಯನವಾದದ ಮೊರೆ ಹೋಗಿದ್ದಾರೆ.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕೇಳಿದ್ರೆ ಅವರು ನಮ್ಮ ಹಿರಿಯರು. ಅವರ ಅಭಿಪ್ರಾಯ ಹೇಳಿದ್ದಾರೆ. ಒಟ್ಟಾಗಿ ಕೆಲಸ ಮಾಡುತ್ತೇವೆ ಆಂದಿದ್ದಾರೆ ತೇಜಸ್ವಿ ಸೂರ್ಯ.
ಪರಿಸ್ಥಿತಿ ನೋಡಿದರೆ ನೆರೆ ಪರಿಹಾರ ಕುರಿತಂತೆ ಮಾತನಾಡಬೇಡಿ ಎಂದು ಬಿಜೆಪಿ ಅಪ್ಪಣೆ ಹೊರಡಿಸಿರುವಂತಿದೆ.
Discussion about this post