ಸೀರಿಯಲ್ ಗಳಲ್ಲಿ ನಟಿಸೋ ಕಲಾವಿದರು ಚಿತ್ರರಂಗದ ಕಡೆಗೆ ಹೋಗೋದು ಮಾಮೂಲಿ. ಆದರೆ ಸಿನಿಮಾದಲ್ಲಿ ನಟಿಸುವವರು ಸೀರಿಯಲ್ ಕಡೆ ಬರೋದು ಅಪರೂಪ. ಹೀಗೆ ಅಪರೂಪದ ಕಾರ್ಯ ಮಾಡಿದವರು ಸ್ವಾತಿ ಕೊಂಡೆ.
ಬ್ಯೂಟಿಫುಲ್ ಮನಸ್ಸುಗಳು ಅನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದವರು, ಕಮರೊಟ್ಟ ಚೆಕ್ ಪೋಸ್ಟ್, ಕಟ್ಟು ಕಥೆ, ವೆನಿಲ್ಲಾ ಅನ್ನೋ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಹೀಗೆ ಕೈ ತುಂಬಾ ಸಿನಿಮಾ ಇರೋ ಸಂದರ್ಭದಲ್ಲೇ ದಿಢೀರ್ ಎಂದು ಕಿರುತೆರೆ ಕಡ ಮುಖ ಮಾಡಿದ ಸ್ವಾತಿ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರವಾಹಿಯಲ್ಲಿ ಲೀಡ್ ರೋಲ್ ಮಾಡುತ್ತಿದ್ದಾರೆ. ಯಾರಿವಳು ಅವಳಿ ಹೆಣ್ಣು ಮಕ್ಕಳ ಸುತ್ತ ನಡೆಯೋ ಕಥೆಯಾಗಿದ್ದು, ಅಹಲ್ಯಾ ಮತ್ತು ಮಾಯ ಅನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದ ಹಾಗೇ ಯಾರಿವಳು ಧಾರವಾಹಿಯನ್ನು ಬಾಹುಬಲಿ ಅನ್ನೋ ಬಿಗ್ ಬಜೆಟ್ ಸಿನಿಮಾ ನಿರ್ಮಿಸಿದ ಅರ್ಕಾ ಮೀಡಿಯಾ ಸಂಸ್ಥೆ ನಿರ್ಮಿಸುತ್ತಿದೆ.
ಈ ನಡುವೆ ಸ್ವಾತಿ ಕೊಂಡೆಗೆ ತಮಿಳು ಸೀರಿಯಲ್ ನಿಂದ ಭರ್ಜರಿ ಆಫರ್ ಒಂದು ಬಂದಿದ್ದು, ತಮಿಳಿನ ಈರಮಾನ ರೋಜಾವೆ ಸೀಸನ್2 ರಲ್ಲಿ ಸ್ವಾತಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರವಾಹಿಯ ಮೊದಲ ಸೀಸನ್ ಕೂಡಾ ಅದ್ಭುತವಾಗಿ ಮೂಡಿ ಬಂದಿತ್ತು.
ಅಕ್ಕನಿಗೆ ಫಿಕ್ಸ್ ಆದ ಹುಡುಗನ ಜೊತೆಗೆ ತಂಗಿ ಮದುವೆಯಾಗುತ್ತದೆ. ತಂಗಿ ಪ್ರೀತಿಸುತ್ತಿದ್ದ ಹುಡುಗನ ಜೊತೆಗೆ ಅಕ್ಕನ ಮಡುವೆಯಾಗುತ್ತದೆ. ಮುಂದೆ ಒಂದೇ ಮನೆಯಲ್ಲಿ ಅಕ್ಕ ತಂಗಿ ಹೀಗೆ ಬದುಕುತ್ತಾರೆ ಅನ್ನುವುದೇ ಈರಮಾನ ರೋಜಾವೆ ಧಾರವಾಹಿಯ ಒನ್ ಲೈನ್ ಸ್ಟೋರಿ.
ಹಾಗಾದ್ರೆ ತಮಿಳು ಪ್ರಾಜೆಕ್ಟ್ ಸಲುವಾಗಿ ಯಾರಿವಳು ಧಾರಾವಾಹಿಯನ್ನು ಸ್ವಾತಿ ತೊರೆಯುತ್ತಾರೆಯೇ ಅನ್ನುವುದು ಈಗಿರುವ ಪ್ರಶ್ನೆ.
Discussion about this post