ಮದುವೆಯಾಗುವ ಭರವಸೆ ನೀಡಿ ಪುರುಷನೊಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಬಳಿಕ ಮೋಸ ಮಾಡಿದರೆ ಅದು ಅಪರಾಧ. ಆದರೆ ವಿವಾಹದ ಭರವಸೆ ಇಲ್ಲದ ಮೇಲೂ ಲೈಂಗಿಕ ಸಂಬಂಧ ಮುಂದುವರಿಸಿದರೆ ಅದು ಅತ್ಯಾಚಾರ ಎಂದು ಆರೋಪಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಾರಾಟ ತೆರಿಗೆ ಇಲಾಖೆಯ ಸಹಾಯ ಆಯುಕ್ತೆಯೊಬ್ಬರ ಅತ್ಯಾಚಾರದ ಆರೋಪದ ಕುರಿತಂತೆ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾ. ಡಿವೈ ಚಂದ್ರಚೂಡ್ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಪೀಠ, ವಿವಾಹ ಖಾತ್ರಿ ಇಲ್ಲ ಎಂದು ಗೊತ್ತಾದ ಬಳಿಕವೂ ಮಹಿಳೆ ಪುರುಷನ ಜೊತೆ ದೀರ್ಘ ಕಾಲ ದೈಹಿಕ ಸಂಬಂಧ ಮುಂದುವರಿಸಿ ನಂತರ ರೇಪ್ ಆರೋಪ ಹೊರಿಸದರೆ ಅದು ಅತ್ಯಾಚಾರ ಎಂದು ಅನ್ನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿದೆ.
ಸಿ.ಆರ್.ಪಿ.ಎಫ್ ಕಮಾಂಡೆಂಟ್ ಮತ್ತು ಮಾರಾಟ ತೆರಿಗೆ ಸಹಾಯ ಆಯುಕ್ತೆ ನಡುವೆ ಸಂಬಂಧ
ಮಹಿಳಾ ಅಧಿಕಾರಿ ಮತ್ತು CRPF ಅಧಿಕಾರಿ 1998ರಿಂದ ಪರಿಚಿತರಾಗಿದ್ದರು. 2008ರಲ್ಲಿ ಮದುವೆ ಭರವಸೆ ಬಳಿಕ ಇವರಿಬ್ಬರು ಲೈಂಗಿಕ ಸಂಬಂಧ ಬೆಳೆಸಿದ್ದರು. ಇದು 2016ರವರೆಗೆ ಮುಂದುವರಿದಿತ್ತು. ಹಲವು ಬಾರಿ ಪರಸ್ಪರರ ಮನೆಗೆ ಹೋಗಿ ತಂಗಿದ್ದರು. ಬಳಿಕ ಇಬ್ಬರದ್ದೂ ಜಾತಿ ಬೇರೆಯಾಗಿದ್ದ ಕಾರಣ ಮದುವೆ ಅಸಾಧ್ಯ ಅನ್ನುವ ಕಾರಣದಿಂದ 2014ರಲ್ಲಿ ಆತಂಕ ಉಂಟಾಗಿತ್ತು. ಆದರೂ ಮದುವೆ ಅಸಾಧ್ಯ ಅನ್ನುವ ಪರಿಸ್ಥಿತಿ ಇದ್ದರೂ ಇವರಿಬ್ಬರ ಸಂಬಂಧ ಮುಂದುವರಿದಿತ್ತು. 2016ರಲ್ಲಿ ಅಧಿಕಾರಿಗೆ ಇನ್ನೊಂದು ಯುವತಿ ಜೊತೆಗೆ ಮದುವೆ ನಿಶ್ಚಯವಾದ ನಂತರ ಮಹಿಳಾ ಅಧಿಕಾರಿ ಅತ್ಯಾಚಾರದ ದೂರು ನೀಡಿದ್ದರು.
Discussion about this post