ಜೆಡಿಎಸ್ನಿಂದ ನಿಮ್ಮೂರಿನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಕಷ್ಟ ಪಟ್ಟು ಓದಿ, ಐಎಎಸ್ ಮಾಡಿದ್ದರು. ಕೆಲಸ ಬಿಡಿಸಿ, ಕರೆದುಕೊಂಡು ಬಂದು ಮೋಸ ಮಾಡಿದ್ದಾರೆ ಎಂದು ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಲಕ್ಷ್ಮೀ ಅಶ್ವಿನ್ ಗೌಡ ಅವರ ಹುಟ್ಟೂರು ಮಳವಳ್ಳಿ ತಾಲೂಕಿನ ನಿಟ್ಟೂರು ಕೋಡಿಹಳ್ಳಿಯಲ್ಲಿ ಪ್ರಚಾರ ಮಾಡಿದ ಅವರು ಈಗ ನನ್ನ ವಿರುದ್ಧ ಇಡೀ ಸರ್ಕಾರವೇ ನಿಂತಿದೆ. ನನಗೆ ವೋಟ್ ಮಾಡಿ ಆಶೀರ್ವದಿಸಿ. ಮಹಿಳೆಯರ, ಮಂಡ್ಯದ ಸ್ವಾಭಿಮಾನ ಎತ್ತಿ ಹಿಡಿಯಿರಿ ಎಂದು ಮನವಿ ಮಾಡಿದರು.
Discussion about this post