ಚುನಾವಣೆಗೆ ಇನ್ನೂ ಒಂದೇ ವರ್ಷ ಬಾಕಿ ಅನ್ನುವಂತಿರುವಾಗ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನು ಬದಲಾಯಿಸಲಾಗಿದೆ. state bjp organizing secretary
ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ರಾಜ್ಯ ನಾಯಕರನ್ನು ನಂಬಿದ್ರೆ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯೋದು ಖಚಿತ ಅನ್ನುವುದು ದೆಹಲಿಯ ವರಿಷ್ಟರಿಗೆ ಅರಿವಾಗಿದೆ. ಈ ನಡುವೆ ರಾಜ್ಯ ನಾಯಕರು ಹಲವಾರು ಏಜೆನ್ಸಿ ಮೂಲಕ ಸರ್ವೆ ಮಾಡಿಸಿದ್ದು, ಮುಂದೆ ಬಿಜೆಪಿಯೇ ಅಧಿಕಾರಕ್ಕೆ ಅನ್ನುವ ವರದಿ ಕೇಳಿ ರಿಲ್ಯಾಕ್ಸ್ ಆಗಿದ್ದಾರೆ. ( state bjp organizing secretary ) ಆದರೆ ಆಡಳಿತ ವಿರೋಧಿ ಅಲೆಯ ಅರಿವು ದೆಹಲಿ ನಾಯಕರಿಗೆ ಆಗಿದೆ.
ಈ ನಡುವೆ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರನ್ನು ಬದಲಾಯಿಸಲಾಗಿದ್ದು, ಆ ಹುದ್ದೆಗೆ ಪುತ್ತೂರು ಮೂಲದ ಆರ್.ಎಸ್.ಎಸ್ ಪ್ರಚಾರಕ ರಾಜೇಶ್ (rajesh kuntur) ಅವರನ್ನು ನೇಮಿಸಲಾಗಿದೆ. ರಾಜೇಶ್ ಅವರು ಕಡಬ ತಾಲೂಕಿನ ಕುಂತೂರಿನವರಾಗಿದ್ದಾರೆ.
ಇದನ್ನೂ ಓದಿ : 13 ವರ್ಷಗಳ ಬಳಿಕ ದೆಹಲಿಗೆ ಭೇಟಿ : ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನ ಬಿಜೆಪಿ ಸಚಿವರ ಮನೆಗೆ ದೌಡು
2010ರಿಂದ ಸಂಘದ ಪೂರ್ಣಾವಧಿ ಪ್ರಚಾರಕರಾಗಿರುವ ಕುಂತೂರು, ಶಿವಮೊಗ್ಗ, ಮೈಸೂರಕು ಸೇರಿದಂತೆ ರಾಜ್ಯ ಅನೇಕ ಕಡೆಗಳಲ್ಲಿ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅವರು ತುಮಕೂರು ಪ್ರಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಈ ತನಕ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅರುಣ್ ಕುಮಾರ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನೇಮಿಸಲಾಗಿದೆ.
ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದು ಸದ್ದು ಮಾಡಿದವರು ಈಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್. ಪಕ್ಷದ ಮೇಲೆ ಈ ಹುದ್ದೆಗೆಷ್ಟು ಹಿಡಿತವಿದೆ ಅನ್ನುವುದರ ಅರಿವನ್ನು ರಾಜಕಾರಣಿಗಳಿಗೆ ಅರ್ಥ ಮಾಡಿಸಿದ ಹಿರಿಮೆ ಸಂತೋಷ್ ಅವರದ್ದು. ಹೀಗಾಗಿಯೇ ರಾಜೇಶ್ ಕುಂತೂರು ನೇಮಕ ಕುತೂಹಲ ಕೆರಳಿಸಿದೆ.
ಇನ್ನು ಆರ್ ಎಸ್ ಎಸ್ ನಲ್ಲಿ ಒಟ್ಟು ಐವರನ್ನು ಬದಲಾಯಿಸಲಾಗಿದೆ.
1. ಗ.ರಾ. ಸುರೇಶ್ : ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಟೋಳಿ ಸದಸ್ಯರು. ಹಾಗೂ ಘುಮಂತು (ಅಲೆಮಾರಿ ಸಮುದಾಯ) ಕಾರ್ಯದ ಕರ್ನಾಟಕ ರಾಜ್ಯ ಪ್ರಮುಖರು.
2. ಶಿ.ಲ. ಕೃಷ್ಣಮೂರ್ತಿ : ಹಿಂದು ಸೇವಾ ಪ್ರತಿಷ್ಠಾನ
3. ಮನೋಹರ ಮಠದ್ : ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕರು
4. ಅರುಣ್ ಕುಮಾರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರು
5. ರಾಜೇಶ್ : ರಾಜನೈತಿಕ ಕ್ಷೇತ್ರ
ಡೆಂಘೀ ಜ್ವರದ ಅಪಾಯದಿಂದ ಪಾರಾಗುವುದು ಹೇಗೆ..?
ಕೊರೋನಾ ಸಂದರ್ಭದಲ್ಲಿ ಡೆಂಘೀ ಜ್ವರದ ಅಬ್ಬರ ಕಡಿಮೆಯಾಗಿತ್ತು. ಈಗ ಕೊರೋನಾ ಅಬ್ಬರ ಕಡಿಮೆಯಾಯ್ತು ಡೆಂಘೀ ಅಬ್ಬರಿಸಲಾರಂಭಿಸಿದೆ.
ಬೆಂಗಳೂರು : ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡೆಂಘೀ ಜ್ವರದ ಅಬ್ಬರ ತೀವ್ರವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದಂತೆ ಗೋಚರಿಸುತ್ತಿದೆ. ಖಾಸಗಿ ಆಸ್ಪತ್ರೆ, ಗಲ್ಲಿ ಮೂಲೆಯ ಕ್ಲಿನಿಕ್ ಗಳಲ್ಲಿ ಡೆಂಘೀ ಜ್ವರದಿಂದ ಬಳಲುತ್ತಿರುವವರೇ ಕಾಣಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಊರಲ್ಲಿರುವ ಪೋಷಕರ ಆತಂಕವೂ ಹೆಚ್ಚಾಗಿದೆ. ಇನ್ನೂ ರಕ್ತ ಪರೀಕ್ಷಾ ಕೇಂದ್ರದಲ್ಲಿ ಪ್ಲೇಟ್ಲೆಟ್ ಲೆಕ್ಕ ಪತ್ತೆ ಹಚ್ಚಲು ಬಂದವರೇ ಹೆಚ್ಚಾಗಿದ್ದಾರೆ.
ಈಗಿನ ವ್ಯವಸ್ಥೆಯಲ್ಲಿ ಡೆಂಘೀ ರೋಗಿಗಳೆಷ್ಟು ಅನ್ನುವ ಪಕ್ಕಾ ಡಾಟಾ ಆರೋಗ್ಯ ಇಲಾಖೆಯ ಬಳಿ ಇಲ್ಲ. ಆದರೆ ಖಾಸಗಿ ವೈದ್ಯರು ಹೇಳುವ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಘೀಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಡೆಂಘೀ ಬಂದ ಮೇಲೆ ಪರಿತಪಿಸುವ ಬದಲು ಅದು ಬಾರದಂತೆ ನೋಡಿಕೊಳ್ಳುವುದು ಮುಖ್ಯ.
ಮೂರು ಹಂತದಲ್ಲಿ ಕಾಡುವ ಡೆಂಘೀ
ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಡುವ ಈಡಿಸ್ ಈಜಿಪ್ಟೆ ಅನ್ನುವ ಸೊಳ್ಳೆ ಈ ಡೆಂಘೀ ಜ್ವರವನ್ನು ಹರಡುತ್ತದೆ. ಈ ಈಡಿಸ್ ಈಜಿಪ್ಟೆ ಸೊಳ್ಳೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕಚ್ಚಿದರೆ ಅಪಾಯ ಹೆಚ್ಚು. ಮೂರು ಹಂತಗಳಲ್ಲಿ ಕಾಡುವ ಈ ಜ್ವರ ಮೊದಲು ಸಾಮಾನ್ಯ ಜ್ವರದಿಂದ ಗೋಚರಿಸಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಅಪಾಯ ಇರೋದಿಲ್ಲ. ಎರಡನೇ ಹಂತದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಲು ಆರಂಭವಾಗುತ್ತದೆ. ಅಲ್ಲೂ ನಿರ್ಲಕ್ಷ್ಯ ವಹಿಸಿದರೆ ದೇಹದಲ್ಲಿ ರಕ್ತಸ್ರಾವ ಪ್ರಾರಂಭವಾಗಿ ರೋಗಿ ಅಪಾಯದ ಹಂತಕ್ಕೆ ತಲುಪುತ್ತಾನೆ.
ಡೆಂಘೀ ಜ್ವರದ ಲಕ್ಷಣಗಳು
ಜ್ವರ, ಅತೀಯಾದ ತಲೆನೋವು, ಶೀತ ಗಂಟಲು ನೋವು, ಕೆಲವೊಂದು ವ್ಯಕ್ತಿಗಳಲ್ಲಿ ವಾಂತಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನಿಶಕ್ತಿ, ಮೈ-ಕೈ ನೋವು, ಭೇದಿ, ಮೈ ಮೇಲೆ ಗುಳ್ಳೆ ಏಳುವುದು. ಹಾಗಂತ ಈ ಎಲ್ಲಾ ಲಕ್ಷಣಗಳಿಗೆ ಕಾಯುವ ಬದಲು ಜ್ವರ ಬಂತು ಅಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ, ಯಾವುದಕ್ಕೂ ಒಂದು ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.
ಮುನ್ನೆಚ್ಚರಿಕಾ ಕ್ರಮಗಳು
ಕೊರೋನಾ ಕಾಲದಲ್ಲಿ ಸ್ವಚ್ಛತೆಗೆ ಸಿಕ್ಕಾಪಟ್ಟೆ ಆದ್ಯತೆ ಕೊಟ್ಟ ಡೆಂಘೀ ಕಾಟ ಕೊಟ್ಟಿರಲಿಲ್ಲ. ಈಗ ಮತ್ತೆ ಸ್ವಚ್ಛತೆಯ ವಿಚಾರದಲ್ಲಿ ನಿರ್ಲಕ್ಷ್ಯ ಪ್ರಾರಂಭವಾಗಿದೆ. ಹೀಗಾಗಿ ಮಳೆಗಾಲದ ಪ್ರಾರಂಭದೊಂದಿಗೆ ಡೆಂಘೀಯೂ ಬಂದಿದೆ. ಹೀಗಾಗಿ ಹೊರಗಡೆ ಹೋಗುವ ಸಂದರ್ಭದಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ. ಅದರಲ್ಲೂ ಮಕ್ಕಳ ಬಗ್ಗೆ ತೀವ್ರ ಕಾಳಜಿ ಅತೀ ಆಗತ್ಯ.
ಇನ್ನು ಹಗಲಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳಬೇಡಿ, ನೀರು ಶೇಖರಿಸುವ ತೊಟ್ಟಿಗಳ ಮುಚ್ಚಳವನ್ನು ಭದ್ರವಾಗಿಸಿ, ಮನೆಯ ಸುತ್ತ, ತಾರಸಿ, ಹೀಗೆ ಎಲ್ಲೆ ಆಗ್ಲೀ ನೀರು ನಿಲ್ಲದಂತೆ ನೋಡಿಕೊಳ್ಳಿ. ಇನ್ನು ಮನೆಯ ಸುತ್ತ ಮುತ್ತ ಸೊಳ್ಳೆ ಕಾಟ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ.
Discussion about this post