ಮಂಗಳೂರು : ಕೆಲ ವರ್ಷಗಳ ಹಿಂದೆ ಲೈಟ್ ಕಂಬವನ್ನು ರಸ್ತೆಯ ಮಧ್ಯ ಭಾಗದಲ್ಲಿ ಬಿಟ್ಟು ಡಾಂಬರೀಕರಣ ಮಾಡಿದ ಚಿತ್ರವೊಂದು ವೈರಲ್ ಆಗಿತ್ತು.
ಇದೀಗ ಇದೇ ರೀತಿಯ ಮತ್ತೊಂದು ಫೋಟೋ ವೈರಲ್ ಆಗಿದೆ.
ವಿಚಿತ್ರ ಅಂದ್ರೆ ಈ ಫೋಟೋ ಸಿಕ್ಕಿರೋದು ಬುದ್ದಿವಂತರ ಜಿಲ್ಲೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.
ಜಿಲ್ಲೆಯ ವಿಟ್ಲದ ಶಾಲಾ ರಸ್ತೆಯಿಂದ ಮೇಗಿನ ಪೇಟೆಯವರೆಗೆ ಡಾಮರೀಕರಣ ನಡೆಯುತ್ತಿದ್ದು, ನಿನ್ನೆ ( ಮಾರ್ಚ್ 16) ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಲೆಯ ಪಕ್ಕದ ರಸ್ತೆಯೊಂದರಲ್ಲಿ ಕಾರ್ ಪಾರ್ಕ್ ಮಾಡಲಾಗಿತ್ತು.
ಕಾರಿನ ಒಂದಿಷ್ಟು ಭಾಗ ರಸ್ತೆಯನ್ನು ಅಕ್ರಮಿಸಿಕೊಂಡಿತ್ತು. ಈ ವೇಳೆ ಅ,ಟು ಜಾಗವನ್ನು ಬಿಟ್ಟು ಡಾಮರೀಕರಣ ಮಾಡಿದ್ದ ಕಾರ್ಮಿಕರು ಮುಂದೆ ಸಾಗಿದ್ದರು.
ಗುತ್ತಿಗೆದಾರರು ತೆಲೆಗೆ ಒಂದಿಷ್ಟು ಕೆಲಸ ಕೊಟ್ಟಿರುತ್ತಿದ್ರೆ ನೀಟಾಗಿ ಡಾಂಬರೀಕರಣ ಮಾಡಬಹುದಿತ್ತು.
Discussion about this post