ಚುನಾವಣಾ ರಾಜಕೀಯದಿಂದ ದೂರ ಸರಿಯಲು ಸೋನಿಯಾಗಾಂಧಿ ನಿರ್ಧಾರ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಲಕ್ಷಣಗಳು ಕಾಣಿಸುತ್ತಿದೆ. ಈಗಾಗಲೇ ಆರೋಗ್ಯದ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರವಿರುವ ಅವರು, ಪಕ್ಷದ ಮಹತ್ವದ ನಿರ್ಧಾರದ ಸಮಯದಲ್ಲಿ ಮಾತ್ರ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ಈ ನಡುವೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ಸಭೆ ಪ್ರವೇಶಿಸಲು ಬಯಸಿರುವ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಒಲವು ಹೊಂದಿಲ್ಲ ಅನ್ನಲಾಗಿದೆ. ಈ ಹಿನ್ನಲೆಯಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿಯವರು ಪ್ರವೇಶ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಇನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿ ಕ್ಷೇತ್ರದಿಂದ ಪ್ರಿಯಾಂಕ ವಾದ್ರಾ ಸ್ಪರ್ಧೆ ಮಾಡಲಿದ್ದಾರಂತೆ.
ಇದನ್ನೂ ಓದಿ ; ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಉಚಿತ ಶಸ್ತ್ರಚಿಕಿತ್ಸೆ
77 ವಯಸ್ಸಿನ ಸೋನಿಯಾ ಗಾಂಧಿಯವರನ್ನು ರಾಜಸ್ಥಾನದಿಂದ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗುತ್ತಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲೇ ಸೋನಿಯಾ ಗಾಂಧಿಯವರು ನಾಮಪತ್ರ ಸಲ್ಲಿಸೋ ಸಾಧ್ಯತೆಗಳಿದ್ದು, ಈ ಮೂಲಕ ಪ್ರಿಯಾಂಕ ವಾದ್ರಾ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಮಾಡಿಕೊಡಲಾಗುತ್ತಿದೆಯಂತೆ.
1950ರಿಂದಲೂ ರಾಯ್ ಬರೇಲಿ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. 2006 ರಿಂದ ಸೋನಿಯಾ ಗಾಂಧಿಯವರು ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ. 2019ರಲ್ಲಿ ರಾಹುಲ್ ಗಾಂಧಿ ಅಮೇಥಿಯಲ್ಲಿ ಸೋತರೂ. ರಾಯ್ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಗೆದ್ದುಕೊಂಡು ಬಂದಿದ್ದರು.
ಇದನ್ನೂ ಓದಿ ; ವ್ಯಾಪಾರದ ಅಭಿವೃದ್ಧಿಗೆ ಡಿಜಿಟಲ್ ಮಾರ್ಕೆಟಿಂಗ್ ಸೂತ್ರ: ವ್ಯಾಪಾರ ಡಿಜಿಟಲೀಕರಣ
ಈ ನಡುವೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಕರ್ನಾಟಕದಿಂದ ತೆರವಾಗಿರುವ ನಾಲ್ಕು ರಾಜ್ಯ ಸಭಾ ಸ್ಥಾನಗಳಿಗೆ ಮೂವರನ್ನು ಕಳುಹಿಸಲು ಮುಂದಾಗಿದೆ. ಬಿಎಲ್ ಶಂಕರ್, ಅಭಿಷೇಕ್ ಮನ್ವಿ, ಮನ್ಸೂರ್ ಖಾನ್ ಹೆಸರು ಅಂತಿಮಗೊಂಡಿದ್ದು, ಶೀಘ್ರದಲ್ಲೇ ನಾಮಪತ್ರಿಕೆ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ನ ಜಿ.ಸಿ. ಚಂದ್ರಶೇಖರ್ ಮತ್ತು ನಾಸೀರ್ ಅಹ್ಮದ್ ಅವರು ರಾಜ್ಯ ಸಭೆಯಿಂದ ನಿವೃತ್ತಿಯಾಗುತ್ತಿದ್ದಾರೆ.
Discussion about this post