ಒಂಟಿ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದ ಕಾಮುಕ
ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಅಪ್ಪಿ ಕಿಸ್ ಕೊಡುತ್ತಿದ್ದ ಕಾಮುಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಸವರಾಜು ಎಂದು ಗುರುತಿಸಲಾಗಿದೆ. ಬಂಧಿತನಿಂದ ಬೈಕ್ ಮತ್ತು ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಸವರಾಜು ಪೀಣ್ಯ 8ನೇ ಮೈಲಿಯ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಕುಟುಂಬದ ಜೊತೆಗೆ ವಾಸವಿದ್ದ ಬಸವರಾಜು ಪತ್ನಿ ಇತ್ತೀಚೆಗೆ ಬಾಣಂತನಕ್ಕಾಗಿ ತವರಿಗೆ ತೆರಳಿದ್ದಳು. ಒಂಟಿಯಾಗಿದ್ದ ಈತ ಈತ ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವ ಯುವತಿಯರು ಮತ್ತು ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ
ಇದನ್ನೂ ಓದಿ : ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಹಿಂದೆ ಅಮೆರಿಕಾ ನೆರಳು
ಇತ್ತೀಚೆಗೆ ಹೆಸರಘಟ್ಟ ಮುಖ್ಯರಸ್ತೆಯ ಖಾಸಗಿ ಕಾಲೇಜು ವಿದ್ಯಾರ್ಥಿ ತಬ್ಬಿ ಮುತ್ತು ಕೊಟ್ಟು ಪರಾರಿಯಾಗಿದ್ದ. ಈಸಂಬಂಧ ವಿದ್ಯಾರ್ಥಿನಿ ಕೊಟ್ಟ ದೂರಿನ ಮೇರೆಗೆ ತನಿಖೆ ಪ್ರಾರಂಭಿಸಿದ ಪೊಲೀಸರು ಸಿಸಿಟಿವಿ ಪೂಟೇಜ್ ಗಳನ್ನು ಸಂಗ್ರಹಿಸಿದ್ದರು. ಇದರ ಆಧಾರದಲ್ಲಿ ಬೈಕ್ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ. ದೂರಿನ ಆಧಾರದ ಮೇಲೆ ಇನ್ಸ್ಪೆಕ್ಟರ್ ಹರಿಯಪ್ಪ ಮಾರ್ಗದರ್ಶನದಲ್ಲಿ ಫೀಲ್ಡ್ಗೆ ಇಳಿದ ಪಿಎಸ್ಐ ಧನುಷ್ ಮತ್ತು ಕೃಪಾಲ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಈತನ ಚಾಳಿಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಪೀಣ್ಯದಲ್ಲಿ ಮಹಿಳೆಯೊಬ್ಬರಿಗೂ ಹೀಗೆ ಮಾಡಿರೋದು ಗೊತ್ತಾಗಿದೆ. ಮಹಿಳೆಯನ್ನು ಸಂಪರ್ಕಿಸಿದಾಗ ಅವರೂ ಕೂಡಾ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ. ಆದರೆ ದೂರು ಕೊಡಲು ಒವರು ಒಪ್ಪಿಲ್ಲ. ಸೂಕ್ತ ಭದ್ರತೆಯ ಭರವಸೆ ಕೊಟ್ಟರೂ ದೂರು ಕೊಡಲು ಮಹಿಳೆ ಸಮ್ಮತಿಸಿಲ್ಲ ಅನ್ನಲಾಗಿದೆ.