ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ( Siddaramaiah birthday ) ಸಿದ್ದತೆಗಳು ಭರದಿಂದ ಸಾಗುತ್ತಿದೆ. ಸಿದ್ದರಾಮಯ್ಯ ( Siddaramaiah ) ಬೆಂಬಲಿಗ ನಾಯಕರು ತಮ್ಮ ನಾಯಕನ 75ನೇ ಹುಟ್ಟು ಹಬ್ಬವನ್ನು ಸಿದ್ದರಾಮೋತ್ಸವ ( Siddaramotsava ) ಎಂದು ಆಚರಿಸಲು ನಿರ್ಧರಿಸಿದ್ದಾರೆ. ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮ ಇದೀಗ ಬಿಜೆಪಿಯ ನಿದ್ದೆಗೆಡಿಸಿದೆ. ಬಿಜೆಪಿ ನಾಯಕರು ಮಾಡುತ್ತಿರುವ ಟ್ವೀಟ್, ಕೊಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ.
ಮೈಸೂರು : ಬಿಜೆಪಿಯವರು ಮೊದಲು ತಮ್ಮ ತೂತುಗಳನ್ನು ಮುಚ್ಚಿಕೊಳ್ಳಲಿ. ಬಳಿಕ ಉಳಿದವರ ಬಗ್ಗೆ ಮಾತನಾಡಲಿ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ( Siddaramotsava ) ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾರನ್ನೂ ಮುಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮೋತ್ಸವಕ್ಕೆ ಬಗ್ಗೆ ಬಿಜೆಪಿ ನಾಯಕರು ಲೇವಡಿಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಡಾ.ಜಿ. ಪರಮೇಶ್ವರ್ ನಮ್ಮ ನಾಯಕರು. ನಮ್ಮ ಪಕ್ಷದಲ್ಲಿ ಯಾರನ್ನೂ ಮುಗಿಸೋದಿಕ್ಕೆ ಸಾಧ್ಯವಿಲ್ಲ. ಆದರೆ ಬಿಜೆಪಿ ನಾಯಕರು ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಅಂದರು. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನು ಬಿಜೆಪಿ ಸರಿ ಮಾಡಿಕೊಳ್ಳಲಿ ಎಂದು ಯತೀಂದ್ರ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : Araga Jnanendra : ಹರ್ಷ ಹಂತಕರಿಗೆ ರಾಜಾಥಿತ್ಯ : ಪರಪ್ಪನ ಆಗ್ರಹಾರಕ್ಕೆ ದಿಢೀರ್ ದೌಡಾಯಿಸಿದ ಅರಗ ಜ್ಞಾನೇಂದ್ರ
ಸಿದ್ದರಾಮಯ್ಯ ( Siddaramaiah ) ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಸಿದ್ದರಾಮೋತ್ಸವ ಆಚರಿಸಲು ಮುಂದಾಗಿದ್ದಾರೆ. ಇದು ಸಿದ್ದರಾಮಯ್ಯ ಬಲಪ್ರದರ್ಶನ ಕಾರ್ಯಕ್ರಮ ಅನ್ನುವ ಮಾತುಗಳು ಮೊದಲು ಕೇಳಿ ಬಂದಿತ್ತು. ಚುನಾವಣೆ ಹೊಸ್ತಿಲಲ್ಲಿ ಮುಂದಿನ ಸಿಎಂ ಯಾರಾಗಬೇಕು ಅನ್ನುವ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಲು ಸಿದ್ದರಾಮಯ್ಯ ತಂತ್ರ ಅನ್ನಲಾಗಿದೆ. ಹೀಗಾಗಿಯೇ ಈ ಕಾರ್ಯಕ್ರಮದ ಬಗ್ಗೆ ಡಿಕೆ ಶಿವಕುಮಾರ್ ಒಂದಿಷ್ಟು ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ ಈಗ ಡಿಕೆ ಶಿವಕುಮಾರ್ ಈ ಕಾರ್ಯಕ್ರಮದ ಬಗ್ಗೆ ಸಾಫ್ಟ್ ಆಗಿದ್ದು, ತಾವು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟದ ಲಾಭ ಪಡೆಯಲು ಹೊರಟ ಬಿಜೆಪಿ ಸಿದ್ದರಾಮೋತ್ಸವ ಟೀಕಿಸಲು ಪಣ ತೊಟ್ಟಿದೆ. ಬಿಜೆಪಿ ನಾಯಕರ ಟ್ವೀಟರ್ ಗಳಲ್ಲಿ ಸಿದ್ದರಾಮೋತ್ಸವದ್ದೇ ಸುದ್ದಿ. ಪರಿಸ್ಥಿತಿ ನೋಡಿದರೆ ಸಿದ್ದರಾಮೋತ್ಸಕ್ಕೆ ಕಾಂಗ್ರೆಸ್ ನವರಿಗಿಂತ ಬಿಜೆಪಿಯವರೇ ಹೆಚ್ಚು ಪ್ರಚಾರ ಕೊಡುತ್ತಿದ್ದಾರೆ
ಸಿದ್ದರಾಮಯ್ಯ ಬರ್ತ್ ಡೇ ಬಗ್ಗೆ ಬಿಜೆಪಿಗ್ಯಾಕೆ ತಲೆ ಬಿಸಿ
ದಾವಣಗೆರೆಯಲ್ಲಿ ಆಯೋಜಿತವಾಗಿರುವ ಸಿದ್ದರಾಮೋತ್ಸವ ಮುಂಬರುವ ಚುನಾವಣೆ ಬಿಜೆಪಿಗೆ ಹೊಡೆತ ಬೀಳಲಿದೆ. ಈಗಾಗಲೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆಯುವುದು ಅನುಮಾನ. ಈ ವೇಳೆ ಸಿದ್ದರಾಮೋತ್ಸವ ನಡೆದರೆ ಬಿಜೆಪಿಯೊಂದಿಗೆ ಮುನಿಸಿರುವ ಮಂದಿಗೆ ಕಾಂಗ್ರೆಸ್ ಜೊತೆಗೆ ಹೋಗಲಿದ್ದಾರೆ. ಹಿಂದುತ್ವ ಬಲದಲ್ಲಿ ಬಂದ ಬಿಜೆಪಿ ಹಿಂದುತ್ವ ವಿಚಾರದಲ್ಲೂ ಎಡವಟ್ಟು ಮಾಡಿಕೊಂಡಿದೆ. ಮೋದಿಗಾಗಿ ಓಟು ಕೊಡಿ ಎಂದು ಮತ ಕೇಳಿದ ಬಿಜೆಪಿ ಮೋದಿಯ ಯೋಜನೆಗಳನ್ನೂ ಜಾರಿ ಮಾಡಿಲ್ಲ. ಸಾಕಷ್ಟು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬಿಜೆಪಿ ಬಗ್ಗೆ ರಾಜ್ಯದ ಜನರಲ್ಲಿ ಆಕ್ರೋಶವಿದೆ ಅನ್ನಲಾಗಿದೆ.
Discussion about this post