ಬೆಂಗಳೂರು : ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನುವ ಕೆಲ ಶಾಸಕರ ಹೇಳಿಕೆಗಳಿಗೆ ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಬ್ರೇಕ್ ಹಾಕಬಹುದಿತ್ತು. ಆದರೆ ಅದ್ಯಾಕೋ ಅವರು ಆ ಬಗ್ಗೆ ಮನಸ್ಸು ಮಾಡಿಲ್ಲ. ಶಿವಕುಮಾರ್ ಉರಿದು ಬೀಳುತ್ತಿರುವುದನ್ನು ಕಂಡು ಸಂತೋಷಪಡುವಂತಿದೆ ಅವರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಸಂದರ್ಭದಲ್ಲಿ ತನ್ನ ಬೆಂಬಲಿಗ ಶಾಸಕರ ಕಿವಿ ಹಿಂಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕಿತ್ತು. ಆದರೆ ನಾನು ಸಿಎಂ ಆಗುವುದಾದ್ರೆ ಮಾತ್ರ ಪಕ್ಷ ಗೆಲ್ಲಲ್ಲಿ ಅನ್ನುವಂತಿದೆ ಅವರ ವರ್ತನೆ.
ಮತ್ತೊಂದು ಕಡೆ ಕಾಂಗ್ರೆಸ್ ಜೀವಂತವಿದೆ ಅನ್ನುವ ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನೇ ಮುಂದಿನ ಸಿಎಂ ಅಂತಾ ಶಾಸಕರು ಹೇಳಿದರೆ ಅದಕ್ಕೆ ನಾನೇನು ಮಾಡಲಿ, ಅವರ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಅಂದಿದ್ದಾರೆ. ಈ ಮೂಲಕ ಸಿಎಂ ಕುರಿತು ಬಹಿರಂಗ ಹೇಳಿಕೆ ಕೊಡದಂತೆ ಹೈಕಮಾಂಡ್ ಹೇಳಿರುವ ಮಾತಿಗೂ ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ.
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಹೇಳಿಕೆಗಳ ಬಗ್ಗೆ ಡಿಕೆಶಿ ದೆಹಲಿಗೆ ದೂರು ಒಯ್ದಿದ್ದು ಇದು ಸಿದ್ದರಾಮಯ್ಯ ಹುಡುಗರನ್ನು ಕೆರಳಿಸಿದೆ. ಹೀಗಾಗಿಯೇ ಸರಣಿಯಾಗಿ ಶಾಸಕರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳತೊಡಗಿದ್ದಾರೆ.
ಈಗ ಸಿದ್ದರಾಮಯ್ಯ ನೇರವಾಗಿ ತಮ್ಮವರ ಪರ ನಿಂತಿದ್ದು, ಕೇವಲ ಡಿಕೆಶಿ ವಿರುದ್ಧ ಮಾತ್ರವಲ್ಲ ಹೈಕಮಾಂಡ್ ವಿರುದ್ಧವೂ ಸಂಘರ್ಷಕ್ಕೆ ನಾನು ಸಿದ್ದ ಅನ್ನುವ ಸಂದೇಶ ರವಾನಿಸಿದ್ದಾರೆ. ಹಾಗೇ ನೋಡಿದರೆ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದು ಬೇಕಿರಲಿಲ್ಲ. ಆಗ ತಮ್ಮ ಮಾತಿಗೆ ಬೆಲೆ ಸಿಕ್ಕಿಲ್ಲ ಎಂದು ಈಗ ತಾಕತ್ತು ತೋರಿಸಲು ಹೊರಟಿದ್ದಾರೆ ಮಾಜಿ ಸಿಎಂ.
Discussion about this post