ಬೆಂಗಳೂರು : ದೇಶಕ್ಕೆ ಮೊಘಲರ ಆಳ್ವಿಕೆ, ಟಿಪ್ಪು ಸುಲ್ತಾನರ ಕೊಡುಗೆಯೇನು ಎಂದು ಸಮಾಜಕ್ಕೆ ಗೊತ್ತಿದೆ. ದೇಶದ ಪರಂಪರೆ, ಸಂಸ್ಕೃತಿ ಹಾಳು ಮಾಡಲಾಗಿದೆ. ಪವಿತ್ರ ಹಿಂದೂ ದೇವಸ್ಥಾನಗಳನ್ನು ದ್ವಂಸ ಮಾಡಿದವರು ಇವರು, ಇಂತವರ ಚರಿತ್ರೆ ನಮಗೆ ಬೇಕಾಗಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಮದುವೆಗಾಗಿ ಮತಾಂತರ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಸಿದ್ದರಾಮಯ್ಯ, ವಿವೇಕ ಇಲ್ಲದ ಸರ್ಕಾರವಿದು ಎಂದು ದೂರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿಕುಮಾರ್ ಮತಾಂತರ ಮಾಡುವುದು ಸಂವಿಧಾನ ಬಾಹಿರ, ಸಂವಿಧಾನಕ್ಕೆ ವಿರುದ್ಧವಾದುದ್ದನ್ನು ತಡೆಯಲು ಹೊರಟರೆ ಸಿದ್ದರಾಮಯ್ಯ ಅವರಿಗ್ಯಾಕೆ ಚಿಂತೆ ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದಾಗ, ಸಿಎಎ ಜಾರಿಗೆ ಮುಂದಾದ ವೇಳೆ, ರಾಮ ಮಂದಿರ ನಿರ್ಮಾಣಕ್ಕೆ ನಿರ್ಧರಿಸಿದಾಗ, ಗೋಹತ್ಯೆ ನಿಷೇಧಿಸಲು ಹೊರಟಾಗ ಕಾಂಗ್ರೆಸ್ ಗೆ ಮುಸ್ಲಿಂ ಓಟ್ ಬ್ಯಾಂಕ್ ನೆನಪಾಗುತ್ತದೆ. ಹೀಗಾಗಿ ಈ ವಿಷಯವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು ಎಂದು ರವಿಕುಮಾರ್ ಹೇಳಿದ್ದಾರೆ.
Discussion about this post