ದೇವೇಗೌಡರು ರಾಜಕೀಯವಾಗಿ ಯಾರನ್ನೂ ಬೆಳೆಸುವುದಿಲ್ಲ. ಇಡೀ ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಯಲು ಅವರು ಬಿಟ್ಟಿಲ್ಲ. ಕುಟುಂಬದವರನ್ನು ಬೆಳೆಸುವುದೇ ಅವರ ಗುರಿ. ಅವರದ್ದೇ ಜಾತಿಯವರನ್ನು ಅವರು ರಾಜಕೀಯವಾಗಿ ಬೆಳೆಸುವುದಿಲ್ಲ ಎಂದು ಮಾಜಿ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ಗುಡುಗಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅನ್ನುವ ದೇವೇಗೌಡರ ಆರೋಪಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಅಳುವುದೇ ದೇವೇಗೌಡರ ಕೆಲಸ. ಇದರಿಂದ ಲಾಭ ಗಿಟ್ಟಿಸಿಕೊಳ್ಳಬಹುದು ಅನ್ನುವುದು ಅವರ ಯೋಚನೆ ಎಂದು ಟೀಕಿಸಿದರು.
ಇದೇ ವೇಳೆ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸಮನ್ವಯ ಸಮಿತಿಯಲ್ಲಿ ಕೈಗೊಂಡ ಯಾವ ತೀರ್ಮಾನವನ್ನೂ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಅವರ ಏಕಪಕ್ಷೀಯ ನಿರ್ಧಾರವೇ ಶಾಸಕರ ಅಸಮಾಧಾನಕ್ಕೆ ಕಾರಣ. ಕುಮಾರಸ್ವಾಮಿ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು ಎಂದು ದೂರಿದರು.
Discussion about this post