ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಿಗೆ ಅನಗತ್ಯವಾಗಿ ಮೋದಿ ಸರ್ಕಾರ ಕಿರುಕುಳ ನೀಡುತ್ತಿದೆ –siddaramaiah birthday
ದಾವಣಗೆರೆ : ಇತ್ತೀಚೆಗೆ ಹತ್ಯೆಯಾದ ಪ್ರವೀಣ ನೆಟ್ಟೂರು ಅವರಿಗೆ ಪರಿಹಾರ ಕೊಟ್ಟಿದ್ದು ಸರಿಯಾಗಿದೆ. ಅವರಿಗೆ ಪರಿಹಾರ ಕೊಡಬೇಡಿ ಎಂದು ನಾನು ಹೇಳುವುದಿಲ್ಲ. ಅದು ಸರಿಯಾದ ಕ್ರಮ ಎಂದು ಬೊಮ್ಮಾಯಿ ನಡೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ ಇದೇ ವೇಳೆ ಕೊಲೆಯಾದ ಮಸೂದ್ ಮತ್ತು ಫಾಜಿಲ್ ಮನೆಗೆ ಭೇಟಿ ನೀಡದ ಬೊಮ್ಮಾಯಿ ನಡೆಯನ್ನು ಖಂಡಿಸಿದ ಸಿದ್ದರಾಮಯ್ಯ, ಅವರಿಗೆ ಪರಿಹಾರವನ್ನು ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.siddaramaiah birthday
ಭಾಷಣ ಪೂರ್ತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ವಿರುದ್ಧ ಮುಗಿಬಿದ್ದ ಸಿದ್ದರಾಮಯ್ಯ siddaramaiah birthday ರಾಜ್ಯ ಸರ್ಕಾರವನ್ನು ಕೂಡಾ ತೀವ್ರ ತರಾಟೆಗೆ ತೆಗೆದುಕೊಂಡರು. ಬೊಮ್ಮಾಯಿಯವರೇ ನಿಮಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಹೇಳಿದ ಸಿದ್ದರಾಮಯ್ಯ ಜನರ ಮಾನ ಮರ್ಯಾದೆ ಜೀವ ರಕ್ಷಣೆ ಮಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ ಅಂದರು.
ಇದನ್ನೂ ಓದಿ : traffic symbol : ಹೊಸ ಟ್ರಾಫಿಕ್ ಚಿಹ್ನೆ ನೋಡಿ ತಲೆ ಕೆಡಿಸಿಕೊಂಡ ಬೆಂಗಳೂರಿಗರಿಗೆ ಪೊಲೀಸರು ಹೇಳಿದ್ದೇನು
ರಾಜ್ಯದಲ್ಲಿ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಮಾತ್ರ ನಲ್ವತ್ತು ಪರ್ಸೆಂಟ್ ಭ್ರಷ್ಟಚಾರದಲ್ಲಿ ತೊಡಗಿದೆ. ಬಿಜೆಪಿಯವರು ಸರ್ವಾಧಿಕಾರ ಧೋರಣೆ ಆಡಳಿತ ನಡೆಸುತ್ತಿದ್ದು, ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ,ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ನವರು, ಹೀಗಾಗಿ ಸಂವಿಧಾನ ರಕ್ಷಿಸುವ ಹೊಣೆ ನಮ್ಮ ಮೇಲಿದೆ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಭರವಸೆ ಈಡೇರಿಸಿದ್ದೇವೆ ಹೀಗಾಗಿ ಮುಂದೆಯೂ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
Discussion about this post