ನಂಜನಗೂಡಿನಲ್ಲಿ ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷ ಶ್ಯಾಂಭಟ್
ನಾಗರಿಕ ಸಮಾಜದಲ್ಲಿ ಸಮಾಜಿಕ ಬಹಿಷ್ಕಾರ ಎನ್ನುವ ಅನಿಷ್ಟ ಪದ್ದತಿ ಬುಡ ಸಮೇತ ತೆಗೆದು ಹಾಕಬೇಕೆಂದು ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷರಾದ ಶ್ಯಾಂಭಟ್ ತಿಳಿಸಿದ್ದಾರೆ.
ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ, ಸಾಮಾಜಿಕ ಬಹಿಷ್ಕಾರ ಘಟನೆಗಳ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕಂಡುಬಂದಲ್ಲಿ ಅವುಗಳನ್ನು ಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ಹೆಚ್ಚಾಗಿ ಪ್ರಕಟಿಸುವ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಇದರ ವಿದುದ್ದ ತೆಗೆದುಕೊಂಡಂತಹ ಕ್ರಮಗಳ ಬಗ್ಗೆ ಹೆಚ್ಚು ಪ್ರಕಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಸಾಮಾಜಿಕ ಬಹಿಷ್ಕಾರ ಎಂಬ ಪಿಡುಗು ತೊಲಗಬೇಕು ಇದನ್ನು ಬುಡ ಸಮೇತ ಕೀಳಲು ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಮುಖ್ಯವಾಗಿ ತಹಸಿಲ್ದಾರ್ ಸಿಡಿಪಿಓ ಮತ್ತು ಪೊಲೀಸ್ ಇಲಾಖೆಯವರು ಇದರ ಬಗ್ಗೆ ಹೆಚ್ಚಾಗಿ ಗಮನ ವಹಿಸಬೇಕು.