ಹಿಂದೆಲ್ಲಾ ಆಸ್ಪತ್ರೆಗಳು ಅಂದ್ರೆ ಸಮಾಜಸೇವೆಯ ಕೇಂದ್ರಗಳಾಗಿತ್ತು. ವೈದ್ಯರು ಅಂದ್ರೆ ದೇವರ ಸ್ವರೂಪಿಯಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಆಸ್ಪತ್ರೆಗಳು ಅಂದ್ರೆ ವ್ಯವಹಾರದ ಕೇಂದ್ರಗಳಾಗಿವೆ. ಕಾಸು ಅಂದ್ರೆ ಸಾಕು ವೈದ್ಯರು ಬಾಯಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಉಳ್ಳವರಿಗೆ ಮಾತ್ರ ಚಿಕಿತ್ಸೆ. ಇನ್ನು ಆಸ್ಪತ್ರೆಗಳ ರಕ್ತದಾಹದ ಪರಿಚಯವಾಗಿದ್ದು ಕೊರೋನಾ ಕಾಲದಲ್ಲಿ.
ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನು ಕಾಡುತ್ತಿದೆ, ಆಸ್ಪತ್ರೆಗಳು ಹೆಣದಲ್ಲೂ ಕಾಸು ಮಾಡುವ ವ್ಯವಹಾರ ನಡೆಸಿತ್ತು. ಮಾನವೀಯತೆ ಸತ್ತು ಹೋಯ್ತು ಅನ್ನುವುದಕ್ಕೆ ಅನೇಕ ಆಸ್ಪತ್ರೆಗಳು ವರ್ತಿಸಿದ ರೀತಿಯೇ ಸಾಕ್ಷಿ. ಇನ್ನು ಕೊರೋನಾ ಕಾರಣಕ್ಕೆ ಅನ್ಯ ರೋಗಗಳಿಗೆ ಚಿಕಿತ್ಸೆ ನೀಡಲು ಅದೆಷ್ಟೋ ಆಸ್ಪತ್ರೆಗಳು ನಿರಾಕರಿಸಿವೆ ಕೂಡಾ.
ಈ ನಡುವೆ ಅಮೆರಿಕದ ಆಸ್ಪತ್ರೆಯೊಂದು ಶಸ್ತ್ರ ಚಿಕಿತ್ಸೆ ಮಾಡುವಾಗ ಕಣ್ಣೀರು ಹಾಕಿದ್ದಕ್ಕೆ ರೋಗಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆಯೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ಶಸ್ತ್ರಚಿಕಿತ್ಸೆ ಸಮಯದಲ್ಲಿ ಅತ್ತಿದ್ದಕ್ಕೆ ಆಸ್ಪತ್ರೆ ದಂಡ ಹಾಕಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಟ್ವೀಟ್ 107 ಲಕ್ಷಕ್ಕೂ ಹೆಚ್ಚು ಲೈಕ್, 8 ಸಾವಿರ ರೀ ಟ್ವೀಟ್ ಹಾಗೂ ಸಿಕ್ಕಾಪಟ್ಟೆ ಕಮೆಂಟ್ ಗಳನ್ನು ಗಳಿಸಿದೆ.
Discussion about this post