ಶಿವಮೊಗ್ಗ : ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿಯಾಗಿದ್ದಾರೆ. ಇತ್ತೀಚೆಗೆ ವಿದೇಶದಿಂದ ಮರಳಿರುವ ಯಡಿಯೂರಪ್ಪ ಮಾಜಿಯಾದ ಬಳಿಕ ಮೊದಲ ಬಾರಿಗೆ ಶಿಕಾರಿಪುರಕ್ಕೆ ತೆರಳಿದ್ದರು.
ಇನ್ನು ಈ ಭೇಟಿ ಕುರಿತಂತೆ ಮಾಹಿತಿ ಕೊಟ್ಟಿರುವ ಶೋಭಾ ಅವರು, ದೇಶದ ಸಮಸ್ತ ರೈತರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವ ಸಲುವಾಗಿ ಯಡಿಯೂರಪ್ಪ ಅವರ ಮಾರ್ಗದರ್ಶನ ಕೋರಲಾಯ್ತು ಅಂದಿದ್ದಾರೆ. ಈ ಹಿಂದಿನ ಕೆಲ ವರ್ಷದ ತನಕ ರಾಜ್ಯ ರಾಜಕಾರಣದಲ್ಲಿ ಹಿಡಿತ ಇಟ್ಟುಕೊಂಡಿದ್ದ ಶೋಭಾ ಕರಂದ್ಲಾಜೆ ವರಿಷ್ಠರ ಸೂಚನೆಯ ಬಳಿಕ ಬೆಂಗಳೂರು ಸಂಪರ್ಕ ಕಡಿದುಕೊಂಡಿದರು. ಕ್ಷೇತ್ರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಅವರು ಪಕ್ಷ ಸಂಘಟನೆ ಕ್ಷೇತ್ರದಲ್ಲಿ ಒತ್ತು ಕೊಟ್ಟಿದ್ದರು. ಇದಾದ ಬಳಿಕವೇ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೂಡಾ ಒಲಿದು ಬಂದಿತ್ತು.
Discussion about this post