ಶೀರೂರು ಮಠದ ಶ್ರೀಗಳು ಯಾವುದೇ ಶಿಷ್ಯ ಸ್ವೀಕಾರ ಮಾಡದ ಹಿನ್ನಲೆಯಲ್ಲಿ ಕೃಷ್ಣ ಮಠದಲ್ಲಿದ್ದ ಪಟ್ಟದ ದೇವರು ಸೋದೆ ಶ್ರೀಗಳ ಸುಪರ್ದಿಗೆ ನೀಡಲು ಉಡುಪಿ ಮಠಾಧೀಶರು ನಿರ್ಧರಿಸಿದ್ದಾರೆ.
ಹೀಗಾಗಿ ಶೀರೂರು ಮಠಕ್ಕೆ ಪೀಠಾದಿಪತಿ ನೇಮಕವಾಗುವವರೆಗೂ ಪಟ್ಟದೇವರು ಸೋದೆ ಮಠದ ಶ್ರೀಗಳ ಪಟ್ಟದ ದೇವರು ಇರಲಿದ್ದು, ವಿಶ್ವವಲ್ಲಭ ತೀರ್ಥರು ಇನ್ನು ಮುಂದೆ ದೇವರ ವಿಗ್ರಹದ ಪೂಜೆ ನಡೆಸಲಿದ್ದಾರೆ.
ಶೀರೂರು ಶ್ರೀ ಲಕ್ಷ್ಮೀವರ ತೀರ್ಥರು ಅನಾರೋಗ್ಯಕ್ಕೆ ಒಳಗಾದ ವೇಳೆಯಲ್ಲಿ ಪಟ್ಟದದೇವರನ್ನು ಅದಮಾರು ತೀರ್ಥರಿಗೆ ನೀಡಲಾಗಿತ್ತು. ಬಳಿಕ ಶೀರೂರು ಶ್ರೀಗಳು ಪಟ್ಟದ ದೇವರನ್ನು ಮರಳಿಸುವಂತೆ ಕೇಳಿದ್ದರೂ. ಲಕ್ಷ್ಮೀವರ ತೀರ್ಥ ಶ್ರೀಗಳು ಶಿಷ್ಯ ಸ್ವೀಕಾರ ಮಾಡದ ಹೊರತು ದೇವರನ್ನು ಮರಳಿಸುವುದಿಲ್ಲ ಎಂದು ಅಷ್ಟ ಮಠಾಧೀಶರು ಪಟ್ಟು ಹಿಡಿದಿದ್ದರು.
ಇದೀಗ ಶ್ರೀಕೃಷ್ಣಮಠದಲ್ಲಿ ಪೂಜಿಸಲ್ಪಡುತ್ತಿದ್ದ ವಿಠ್ಠಲ ದೇವರ ವಿಗ್ರಹವನ್ನು ಶೀರೂರು ಶ್ರೀ ನಿಧನದ ಬಳಿಕ ಈಗ ಸೋದೆ ಮಠದ ಸುಪರ್ಧಿಗೆ ಒಪ್ಪಿಸಲಾಗಿದೆ.
Discussion about this post