ಶಿವಮೊಗ್ಗ : ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಕೊಡಲಿಲ್ಲ ಅನ್ನುವ ಏಕೈಕ ಕಾರಣಕ್ಕೆ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ 38 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಲುವಾಗಿ ಸುಬ್ಬಯ್ಯ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಕಲಿಗಿಲ್ಲ ಅವಕಾಶವಿಲ್ಲ ಅನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆ ಬಹಿಷ್ಕರಿಸಿದ್ದಾರೆ.
ಕೋಲ್ಕತ್ತಾದ ಕೇಂದ್ರದಲ್ಲಿ ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳಿಂದ ತಲಾ 1.80 ಲಕ್ಷ ರೂಪಾಯಿ ಪಡೆಯಲಾಗಿತ್ತು. ಆಗ ನಕಲಿಗೆ ಅವಕಾಶವಿದೆ ಎಂದು ಭರವಸೆ ಕೊಡಲಾಗಿತ್ತು, ಆದರೆ ಈಗ ನುಡಿದಂತೆ ನಡೆದಿಲ್ಲ ಅನ್ನುವುದು ವಿದ್ಯಾರ್ಥಿಗಳ ದೂರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲರಾದ ವನಮಾಲ ಸತೀಶ್ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲ. ಅವರು ಪ್ರವೇಶ ಪಡೆದಿದ್ದ ಕಾಲೇಜಿನಲ್ಲಿ ಸಮಸ್ಯೆಯಾದ ಕಾರಣ ನಮ್ಮ ಕಾಲೇಜಿನ್ನು ಪರೀಕ್ಷಾ ಕೇಂದ್ರವನ್ನಾಗಿಸಲಾಗಿದೆ.
ಸೋಮವಾರ ಪರೀಕ್ಷಾ ಪ್ರವೇಶ ಪತ್ರ ವಿಳಂಬವಾದ ಕಾರಣ ಅರ್ಧ ಗಂಟೆ ತಡವಾಗಿ ಪರೀಕ್ಷೆ ಪ್ರಾರಂಭವಾಗಿತ್ತು. ನಮ್ಮಲ್ಲಿ ನಕಲಿಗೆ ಅವಕಾಶ ಇಲ್ಲ ಎಂದು ಗೊತ್ತಾದ ಕಾರಣಕ್ಕೆ ಅವರು ಆಕ್ರೋಶಗೊಂಡಿರಬಹುದು ಅಂದಿದ್ದಾರೆ.
ಕೊರೊನಾ ಕಾರಣ ಸಕಾಲಕ್ಕೆ ದಾಖಲೆ ಒದಗಿಸದ ಕಾರಣ ಈ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಜೊತೆಗೆ ಅವರದ್ದೇ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವೂ ಸಿಕ್ಕಿರಲಿಲ್ಲ. ಹೀಗಾಗಿ ಇಂಡಿಯನ್ ಸರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಆದರೆ ಈಗ ನಕಲು ಮಾಡಲು ಅವಕಾಶ ನೀಡಲಿಲ್ಲ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ ಅಂತಾ ವಿದ್ಯಾರ್ಥಿಗಳನ್ನು ಕರೆ ತಂದಿರುವ ಕೋಲ್ಕತ್ತಾದ ಮಾರ್ಡನ್ ನರ್ಸಿಂಗ್ ಕೋಚಿಂಗ್ ಸೆಂಟರ್ನ ಆಚಾರ್ಯ ತಿಳಿಸಿದ್ದಾರೆ.
Discussion about this post