ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ಪ್ರಭಾವದಿಂದ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ರಾಜ್ಯ ಸರ್ಕಾರದಲ್ಲಿ ಗಾಬರಿ ಹುಟ್ಟಿಸಿದೆ. ಹೀಗಾಗಿ ಮುಖ್ಯಮಂತ್ರಿಗಳೇ ಇದೀಗ ಫೀಲ್ಟಿಗೆ ಇಳಿದಿದ್ದು, ಸೋಂಕು ಹೆಚ್ಚಿರುವ ಜಿಲ್ಲೆಗಳ ಪ್ರವಾಸ ಪ್ರಾರಂಭಿಸಿದ್ದಾರೆ. ಈ ಹಿನ್ನಲೆಯಲ್ಲಿ ನಿನ್ನೆ ಮತ್ತು ಇವತ್ತು ಉಡುಪಿಯ ಜಿಲ್ಲೆಯ ಪ್ರವಾಸವನ್ನು ಬೊಮ್ಮಾಯಿ ಕೈಗೊಂಡಿದ್ದಾರೆ.
ನಿನ್ನೆ ದಕ್ಷಿಣ ಕನ್ನಡ ಜಿಲ್ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೊರೋನಾ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಾಗೇ ನೋಡಿದರೆ ಜಿಲ್ಲಾಧಿಕಾರಿಗಳೇ ಈ ನಿರ್ಧಾರವನ್ನು ಯಾವತ್ತೋ ಕೈಗೊಳ್ಳಬೇಕಾಗಿತ್ತು.
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಏರಿಕೆಗೆ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರುವುದೇ ಕಾರಣ ಅನ್ನುವುದನ್ನು ತಜ್ಞರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದಾರೆ. ಸೋಂಕಿನ ಲಕ್ಷಣವಿಲ್ಲದ ಸೋಂಕಿತರು ಹಾಗೂ ಗಂಭೀರವಾಗಿ ಸೋಂಕಿಗೆ ತುತ್ತಾಗದ ಮಂದಿ ಹೆಸರಿಗಷ್ಟೇ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಬಹುತೇಕರು ಅಧಿಕಾರಿಗಳ ಕಣ್ಣು ತಪ್ಪಿಸಿ ಮನೆಯಿಂದ ಹೊರಗೆ ಓಡಾಡುತ್ತಿದ್ದಾರೆ. ಇವರಿಂದ ಮತ್ತಷ್ಟು ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜೊತೆಗೆ ಮನೆ ಮಂದಿಗೂ ಇವರಿಂದ ಸೋಂಕು ಹರಡುತ್ತಿದೆ.
ಹೀಗಾಗಿ ಮನೆಯಲ್ಲಿರುವ ಸೋಂಕಿತರನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ ವಾರದೊಳಗೆ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರ ಮಾಡುವಂತೆ ಬೊಮ್ಮಾಯಿ ಆದೇಶಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಶೇ.90 ಮಂದಿ ಮನೆಯಲ್ಲೇ ಇದ್ದು ಇದು ಸೋಂಕು ಹರಡಲು ಕಾರಣವಾಗುತ್ತಿದೆ. ಹೀಗಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರನ್ನು ಸಿಸಿಸಿಗೆ ದಾಖಲಿಸಬೇಕು. ಜೊತೆಗೆ ಯಾರನ್ನು ಆಸ್ಪತ್ರೆಗೆ ದಾಖಲಿಸಬೇಕು ಅನ್ನುವುದನ್ನು ಕೂಡಾ ವೈದ್ಯರು ನಿರ್ಧರಿಸಬೇಕು ಎಂದು ಸಿಎಂ ಹೇಳಿದ್ದಾರೆ.
ಎರಡನೇ ಅಲೆಯನ್ನು ದಕ್ಷಿಣ ಕನ್ನಡ ಸಮರ್ಥವಾಗಿ ಎದುರಿಸಿದೆ. ಆದರೆ ಕೇರಳದ ಕಾರಣದಿಂದ ಮೂರನೇ ಅಲೆಯ ಬಗ್ಗೆ ಭಯವಿದೆ. ಹೀಗಾಗಿ ಲಾಕ್ಡೌನ್ ಮಾಡಿ ಎಲ್ಲರನ್ನೂ ಸಮಸ್ಯೆಗೆ ಸಿಲುಕಿಸುವ ಬದಲು, ಈಗ್ಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ.
Reduce Covid positivity rate or prepare for lockdown in Dakshina Kannada: CM Basavaraj Bommai- CM Bommai directed officials in Dakshina Kannada district to step up the facilities in CCCs and ensure there is adequate supply of oxygen concentrators, medicine and health staff
Discussion about this post