ಬೆಳಗಾವಿ – ಮಿರಜ್ – ಬೆಳಗಾವಿ ನಡುವೆ ಪ್ಯಾಸೆಂಜರ್ ರೈಲು ಸೇವೆ ಮುಂದುವರಿಸಿ
ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಸಭೆ ನಡೆಸಿದರು.
ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲ್ವೆ ಮಾರ್ಗದ ಕುರಿತು ಹಾಗೂ ಪ್ರಸ್ತುತ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದ ಮಾಹಿತಿ ಪಡೆದ ಅವರು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.
ಬೆಂಗಳೂರು ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಳಗಾವಿ – ಮಿರಜ್ – ಬೆಳಗಾವಿ ನಡುವೆ ಪ್ಯಾಸೆಂಜರ್ ರೈಲು ಸೇವೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಮುಂದುವರಿಸುವಂತೆ ಸೂಚಿಸಿದರು.
ಇದೇ ಸಭೆಯಲ್ಲಿ ಬೆಳಗಾವಿ -ಕಿತ್ತೂರು -ಧಾರವಾಡ ನೂತನ ರೈಲ್ವೆ ಮಾರ್ಗದ ಪ್ರಸ್ತುತ ಯೋಜನೆಯ ಪ್ರಗತಿಯ ಕುರಿತು ವರದಿ ಪಡೆದು, ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಿದ ಸಂಸದರು ಪುಣೆ- ಬೆಳಗಾವಿ- ಧಾರವಾಡ ವಂದೇ ಭಾರತ ರೈಲಿನ ಮಾದರಿಯಲ್ಲಿ ಬೆಂಗಳೂರು – ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಬಗ್ಗೆ ಯಾವುದೇ ತಾಂತ್ರಿಕ ದೋಷ ಇಲ್ಲದಿರುವುದು ಕಂಡುಬಂದಿದ್ದರಿಂದ ಶೀಘ್ರವಾಗಿ ಬೆಳಗಾವಿಯವರೆಗೆ ವಂದೇ ಭಾರತ ರೈಲನ್ನು ವಿಸ್ತರಿಸಿ ಎಂದು ಒತ್ತಾಯಿಸಿದರು.
ಸವದತ್ತಿ ಹತ್ತಿರದ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ನೂತನ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿ, ವರದಿಯನ್ನು ತಯಾರಿಸುವಂತೆ ತಿಳಿಸಿ, ಅದರಂತೆ ಸಮೀಕ್ಷೆ ಮುಗಿದಿರುವಂತಹ ಬೆಳಗಾವಿಯಿಂದ ಸಾವಂತವಾಡಿಯ ವರೆಗೂ ಸಹ ನೂತನ ಕೊಂಕಣ ರೈಲ್ವೆ ಸಂಪರ್ಕ ಹಾಗೂ ಬೆಳಗಾವಿ ಕೊಲ್ಲಾಪುರ್ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.