ಶಶಿಕುಮಾರ್ ( Shashi Kumar BJP )ಚಿತ್ರರಂಗದಲ್ಲಿ ಉತ್ತಮ ನಾಯಕ. ಆದರೆ ರಾಜಕೀಯದಲ್ಲಿ ಅವರೊಬ್ಬ ಬೆಸ್ಚ್ ಲೀಡರ್ ಅನ್ನಿಸಿಕೊಳ್ಳಲಿಲ್ಲ
ಬೆಂಗಳೂರು : ತುಮಕೂರು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತು ಚಿತ್ರದುರ್ಗದ ಮಾಡಿ ಸಂಸದ ಚಿತ್ರನಟ ಶಶಿಕುಮಾರ್ ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ.( Shashi Kumar BJP)
ಕಾಂಗ್ರೆಸ್ ನ ಇಬ್ಬರು ಮಾಜಿ ಸಂಸದರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಬೀಗಬಹುದು. ಆಧರೆ ಕಾಂಗ್ರೆಸ್ ಅವರಿಬ್ಬರನ್ನೂ ತಿರಸ್ಕರಿಸಿದೆ ಅನ್ನೋದನ್ನ ಮರೆಯುವ ಹಾಗಿಲ್ಲ. ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಕಡೆಯಿಂದ ಅನ್ಯಾಯವಾಗಿದೆ. ನಂಬಿಸಿ ಕತ್ತು ಕೊಯ್ಯುವ ಕೆಲಸವಾಗಿದೆ ಅನ್ನುವ ಆರೋಪದಲ್ಲಿ ಸತ್ಯಾಂಶವಿದೆ. ದೇವೇಗೌಡರ ಸಲುವಾಗಿ ಅವಕಾಶ ಕಳೆದುಕೊಂಡ ಅವರನ್ನು ಕಾಂಗ್ರೆಸ್ ಮೂಲೆಗೆ ತಳ್ಳಿತು. ಹೀಗಾಗಿ ರಾಜಕೀಯ ವನವಾಸ ಇಷ್ಟವಿಲ್ಲದ ಮುದ್ದಹನುಮೇಗೌಡ ಬಿಜೆಪಿ ಬರುತ್ತಿದ್ದಾರೆ. ಮುದ್ದಹನುಮೇಗೌಡರ ಆಗಮನದಿಂದ ಬಿಜೆಪಿ ಆ ಭಾಗದಲ್ಲಿ ಒಂದಿಷ್ಟು ಬಲವೃದ್ಧಿಸಿಕೊಳ್ಳಲಿದೆ.( Shashi Kumar BJP)
ಇನ್ನು ಚಿತ್ರನಟ ಶಶಿಕುಮಾರ್, ತಾಳ್ಮೆಯ ಕೊರತೆಯಿಂದ ತಮ್ಮ ರಾಜಕೀಯ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಂಡವರು. ಮಾತ್ರವಲ್ಲದೆ ಅವಕಾಶದ ಆಸೆಗಾಗಿ ಪಕ್ಷಾಂತರ ಮಾಡಿದ ಕಾರಣದಿಂದಲೇ ಮತದಾರರು ಅವರನ್ನು ನಂಬದ ಸ್ಥಿತಿ ನಿರ್ಮಿಸಿಕೊಂಡರು.
Read More : ola uber app : ಕೈ ತೋರಿಸಿ ಆಟ್ರೋ ನಿಲ್ಲಿಸಿದ್ರೆ 30 ರೂ… ಓಲಾ, ಉಬರ್ ಗೆ 100 ರೂ
1999-2004ರ 13ನೇ ಲೋಕಸಭೆಯಲ್ಲಿ ಸಂಯುಕ್ತ ಜನತಾದಳದಿಂದ ಚಿತ್ರದುರ್ಗ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2004ರಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ಕಾರಣ ಜೆಡಿಎಸ್ ಗೆ ಬಂದ ಶಶಿಕುಮಾರ್ ಚಿಕ್ಕಬಳ್ಳಾಪುರದಲ್ಲಿ ಕಣಕ್ಕಿಳಿದ್ರು. ಆರ್.ಎಲ್ ಜಾಲಪ್ಪ ಮುಂದೆ ಸೋತ ಶಶಿಕುಮಾರ್ ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ರು. ಆದ್ಯಾಕೋ ಅಲ್ಲಿ ಅವರಿಗೆ ಅವಕಾಶಗಳು ಸಿಗಲಿಲ್ಲ. ಹೀಗಾಗಿ 2018ರಲ್ಲಿ ಮತ್ತೆ ಜೆಡಿಎಸ್ ಕಡೆ ವಲಸೆ ಬಂದ್ರು. ಈ ನಡುವೆ ಒಂದಿಷ್ಟು ವರ್ಷ ಜೆಡಿಎಸ್ ನಲ್ಲಿದ್ದ ಶಶಿಕುಮಾರ್ ಮತ್ತೆ ಕಾಂಗ್ರೆಸ್ ಕಡೆ ಹೋಗಿದ್ದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಶಶಿಕುಮಾರ್ ಸ್ಪರ್ಧೆಗೂ ಸಜ್ಜಾಗಿದ್ದರು. ಆದರೆ ಶಶಿಕುಮಾರ್ ಶಕ್ತಿಕೇಂದ್ರವಾಗಬಹುದು ಅನ್ನುವ ಆತಂಕದಿಂದ ಕಾಂಗ್ರೆಸ್ ಅವರನ್ನು ಬೆಳೆಸಲಿಲ್ಲ. ಹೀಗಾಗಿ ಸಹಜವಾಗಿಯೇ ಅವರು ಬೇಸರಗೊಂಡಿದ್ದರು.
ಇನ್ನು 2023ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಶಶಿಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಯೋಚಿಸಿದ್ದರು. ಜಿ.ಟಿ. ದೇವೇಗೌಡರನ್ನು ಮಣಿಸಲು ಈ ರಣತಂತ್ರ ಹೆಣೆಯಲಾಗಿತ್ತು. ಆದರೆ ಯಾವಾಗ ತಾವು ಇಚ್ಛಿಸಿದ ಭಾಗದಿಂದ ಟಿಕೆಟ್ ಇಲ್ಲ ಅನೋದು ಗೊತ್ತಾಯ್ತೋ, ಶಶಿಕುಮಾರ್ ಕೇಸರಿ ಪಾಳಯಕ್ಕೆ ಆಗಮಿಸುತ್ತಿದ್ದಾರೆ.
ಹಾಗಾದ್ರೆ ಶಶಿಕುಮಾರ್ ಬಿಜೆಪಿಯಿಂದ ಗೆದ್ದು ಶಾಸಕರಾಗ್ತಾರೆಯೇ. ಅದು ಕಷ್ಟವಿದೆ. ಈಗಾಗಲೇ ಬೊಮ್ಮಾಯಿಯವರ ಆಡಳಿತ ವೈಖರಿಯಿಂದ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ನಲ್ಲಿ ನವ ಚೈತನ್ಯ ತುಂಬಿದೆ. ಇನ್ನು ಮೊಳಕಾಲ್ಮೂರು, ಚಳ್ಳಕೆರೆ ಚಿತ್ರದುರ್ಗದಲ್ಲಿ ಬಿಜೆಪಿ ನಾಯಕರಲ್ಲೇ ಸಾಕಷ್ಟು ಒಡಕುಗಳಿದೆ. ಹೀಗಿರುವ ಸಂದರ್ಭದಲ್ಲಿ ಶಶಿಕುಮಾರ್ ಗೆಲ್ಲಬೇಕಾದ್ರೆ ಎರಡು ಚುನಾವಣೆಯ ಶ್ರಮ ಹಾಕಬೇಕಾದಿತು.
Discussion about this post