ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಬಳಿಕ ಹಲವು ರಹಸ್ಯಗಳು ಹೊರ ಬರಲಾರಂಭಿಸಿದೆ. ಮಾಂಡ್ರೆ ಜೊತೆಗೆ ಕೇವಲ ಬ್ಯುಸಿನೆಸ್ ಮ್ಯಾನ್ ಗಳು ಮಾತ್ರವಲ್ಲದೆ, ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಪುತ್ರರೂ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೂ ಮುನ್ನ ಗಣ್ಯ ವ್ಯಕ್ತಿಗಳ ಮಕ್ಕಳೊಂದಿಗೆ ತಡರಾತ್ರಿ 2.30ರವರೆಗೂ ಪಾರ್ಟಿ ಮಾಡಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಸಿಲಿಕಾನ್ ಸಿಟಿಯ ಸ್ಯಾಂಕಿ ರಸ್ತೆಯಲ್ಲಿರುವ ಪ್ರೆಸ್ಟೀಜ್ ಆಬ್ಶಾಟ್ ಅಪಾರ್ಟ್ಮೆಂಟ್ ಒಂದರಲ್ಲಿ ಶುಕ್ರವಾರ ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು.
ಆಬ್ಶಾಟ್ ಅಪಾರ್ಟ್ಮೆಂಟ್ನ ಮೂರನೇ ಮಹಡಿಯಲ್ಲಿರುವ ಮಾಜಿ ಸಚಿವರೊಬ್ಬರ ಮಗನ ಮನೆಯಲ್ಲಿ ಈ ಪಾರ್ಟಿ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಣ್ಯ ವ್ಯಕ್ತಿಗಳ ಮಕ್ಕಳು ಭಾಗವಹಿಸಿದ್ದರು ಎನ್ನಲಾಗಿದೆ.
ಪಾರ್ಟಿ ಬಳಿಕ ಡಾನ್ ಥಾಮಸ್ ಎಂಬುವವರ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಗೆಳೆಯ ಲೋಕೇಶ್ ಸೇರಿ ಇತರರು ತೆರಳಿದ್ದರು.
ಪಾರ್ಟಿ ಮುಗಿಸಿ ಬರುವ ಸಂದರ್ಭದಲ್ಲಿ ಎಣ್ಣೆ ಏಟಿನಿಂದ ಕಾರು ಅಪಘಾತವಾಗಿದೆ ಎನ್ನಲಾಗಿದೆ.
ಮಾಂಡ್ರೆ ಜೊತೆಗಿದ್ದ ಲೋಕೇಶ್ ಗೆ ರಾಜಕಾರಣಿಗಳು, ದೊಡ್ಡ ಉದ್ಯಮಿಗಳ ಪರಿಚಯವಿದ್ದು, ಈ ಮೂಲಕ ಕಾರು ಅಪಘಾತ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆಸಿದ್ದಾರೆ ಎನ್ನಲಾಗಿದೆ.
ಕಾರು ಮಾಲೀಕ ಡಾನ್ ಥಾಮಸ್ ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಹಾಗಾದ್ರೆ ಪಾರ್ಟಿ ಆಯೋಜಿಸಿದ್ದು ಯಾರು, ಆ ಪಾರ್ಟಿಯಲ್ಲಿ ಯಾರಿದ್ದರು ಅನ್ನುವುದನ್ನು ಪೊಲೀಸರು ತನಿಖೆ ನಡೆಸಬೇಕಾಗಿದೆ. ಜೊತೆಗೆ ಈ ಪಾರ್ಟಿಯಲ್ಲಿ ಮದ್ಯಪಾನ ಪೂರೈಕೆಯಾಗಿತ್ತಾ, ಲಾಕ್ ಡೌನ್ ಇದ್ದರೂ ಮದ್ಯ ಸಿಕ್ಕಿದ್ದು ಹೇಗೆ ಅನ್ನುವುದು ಸಮಾಜಕ್ಕೆ ಗೊತ್ತಾಗಬೇಕಾಗಿದೆ.
ಇನ್ನು ಲಾಕ್ ಡೌನ್ ಮುರಿದು ಜನ ಸಾಮಾನ್ಯ ರಸ್ತೆ ಬಂದ್ರೆ ಲಾಠಿಯೇಟು ಕೊಡುವ ಪೊಲೀಸರು, ಲಾಕ್ ಡೌನ್ ಮುರಿದ ಸೆಲೆಬ್ರೆಟಿಗಳನ್ನು ಜೈಲಿಗೆ ಕಳುಹಿಸಬೇಕು ತಾನೇ.
Discussion about this post