ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಜನ ಸಾಮಾನ್ಯನೊಬ್ಬ ಹೀಗೆ ಲಾಕ್ ಡೌನ್ ಉಲ್ಲಂಘಿಸಿದ್ರೆ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇದಕ್ಕೆ ಕಾರಣವಿಲ್ಲದಿಲ್ಲ, ಅಪಘಾತವಾದ ಶರ್ಮಿಳಾ ಮಾಂಡ್ರೆಯ ಕಾರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ವಿತರಿಸಿದ್ದ ಎಮರ್ಜೆನ್ಸಿ ಪಾಸ್ ಅನ್ನು ಅಂಟಿಸಲಾಗಿತ್ತು.
ಜಾಗ್ವಾರ್ ಕಾರು ಮಾಲೀಕನಿಗೆ ಅದ್ಯಾವ ಕಾರಣಕ್ಕೆ ಎಮರ್ಜೆನ್ಸಿ ಪಾಸ್ ವಿತರಿಸಲಾಗಿತ್ತು. ಭಾರತಕ್ಕೆ ಭಾರತವೇ ಕೊರೋನಾದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ ಈ ಸೆಲೆಬ್ರೆಟಿಗೆ ಅದ್ಯಾವ ತುರ್ತು ಕಾರ್ಯವಿತ್ತು. ಪೊಲೀಸರು ಅದ್ಯಾವ ಆಧಾರದಲ್ಲಿ ಈ ತುರ್ತು ಪಾಸ್ ಅನ್ನು ವಿತರಿಸಿದರು. ಈ ಬಗ್ಗೆ ತನಿಖೆಯಾಗಲೇಬೇಕು. ಸೆಲೆಬ್ರೆಟಿ ಎಂದು ಕರೆಸಿಕೊಂಡವಳು ಎಮರ್ಜೆನ್ಸಿ ಪಾಸ್ ಅನ್ನು ಇಷ್ಟರ ಮಟ್ಟಿಗೆ ದುರುಪಯೋಗಪಡಿಸಿಕೊಂಡಿದ್ದಾಳೆ ಅಂದ ಮೇಲೆ ಇನ್ನೆಷ್ಟು ಮಂದಿ ದುರುಪಯೋಗಪಡಿಸಿಕೊಂಡಿರಲು ಸಾಧ್ಯವಿಲ್ಲ. ಹೀಗಾಗಿ ತುರ್ತು ಪಾಸ್ ಯಾರಿಗೆಲ್ಲಾ ವಿತರಿಸಲಾಗಿದೆ ಅನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕಾಗಿದೆ.
ನಿಜಕ್ಕೂ ಅಗತ್ಯವಿರುವ ವ್ಯಕ್ತಿಯೊಬ್ಬನಿಗೆ ಇಷ್ಟು ಸುಲಭದಲ್ಲಿ ಪಾಸ್ ದೊರೆಯಲು ಸಾಧ್ಯವೇ. ಹಾಗಿರುವಾಗ ಶರ್ಮಿಳಾ ಮಾಂಡ್ರೆ ಕೂತಿದ್ದ ಕಾರು ಹಾಗೂ ಅದರ ಜೊತೆಗಿದ್ದ ಐದಾರು ಕಾರುಗಳಿಗೆ ತುರ್ತು ಪಾಸ್ ಇತ್ತು ಅನ್ನುವ ಸುದ್ದಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
Discussion about this post