ಬೆಂಗಳೂರು : ಕೊರೋನಾ ಎರಡನೆ ಅಲೆ ತಡೆ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸು ಮಾರ್ಗಸೂಚಿಗಳನ್ನು ಆರೋಗ್ಯ ಸಚಿವ ಡಾ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಈಗಾಗಲೇ ತಡವಾಗಿದೆ, ಇನ್ನಾದರೂ ಟಫ್ ರೂಲ್ಸ್ ಗಳನ್ನು ಜಾರಿಗೊಳಿಸದಿದ್ರೆ ಮುಂದೆ ದೊಡ್ಡ ಅನಾಹುತವಾಗಬಹುದು ಅನ್ನುವ ಎಚ್ಚರಿಕೆಯನ್ನು ಅವರು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡನೇ ಅಲೆಯ ಹೊಸ್ತಿಲಲ್ಲಿ ನಾವು ನಿಂತಿದ್ದೇವೆ. ಕಳೆದ ಒಂದು ತಿಂಗಳಿನಿಂದ ಎಚ್ಚರಿಕೆ ನೀಡಿದ್ದೇನೆ. ನಮ್ಮ ಚಟುವಟಿಕೆ, ನಡವಳಿಕೆ ಬದಲಾಗದಿದ್ರೆ, ಕೊರೋನಾವನ್ನು ಅರ್ಥ ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ರೆ ಕಠಿಣ ಕ್ರಮವಲ್ಲದೆ ಪರ್ಯಾಯ ಮಾರ್ಗ ಇರೋದಿಲ್ಲ ಅಂದಿದ್ದೆ.
ನಿರ್ಲಕ್ಷ್ಯ ಮುಂದುವರಿದ್ರೆ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲು ನೀವೇ ಕಾರಣರಾಗುತ್ತೀರಿ. ಮಾಸ್ಕ್, ಗುಂಪು ಸೇರುವುದನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿದ್ದೆ. ಈಗ ದಿನಕ್ಕೆ 5 ಸಾವಿರ ಕೇಸ್ ಗಳು ಬರಲಾರಂಭಿಸಿದೆ. ಮೊದಲ ಅಲೆಯಲ್ಲಿ 4500 ಮಾತ್ರ ಪತ್ತೆಯಾಗಿತ್ತು.
ಈ ನಡುವೆ ತಾಂತ್ರಿಕ ಸಲಹಾ ಸಮಿತಿ ಮುನ್ನೆಚ್ಚರಿಕೆ ಪ್ರಕಾರ ಇನ್ನೆರೆಡು ತಿಂಗಳು ಕೊರೋನಾ ಅಬ್ಬರಿಸಲಿದೆ. ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಿಂದ ನಿಧಾನವಾಗಿ ಸೋಂಕಿನ ಅಬ್ಬರ ಕಡಿಮೆಯಾಗಲಿದೆ.
ಹೀಗಾಗಿ ಕಠಿಣ ಕ್ರಮ ಅನಿವಾರ್ಯ ಎಂದು ಸರ್ಕಾರದ ನಡೆಯಲು ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಸಿನಿಮಾ ಮಂದಿರಗಳಿಗೆ ವಿಧಿಸಿರುವ ಟಫ್ ರೂಲ್ಸ್ ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ.
ಸುಧಾಕರ್ ಇಂದು ಹೇಳಿರುವ ಮಾತುಗಳು ವ್ಯಕ್ತಿಗತವಾಗಿ ಯಾರನ್ನೂ ಉದ್ದೇಶಿಸಿ ಇರಲಿಲ್ಲ. ಬದಲಾಗಿ ಅದು ಚಿತ್ರರಂಗದ ಸೆಲೆಬ್ರೆಟಿಗಳನ್ನು ಗುರಿ ಮಾಡಿದ ಮಾತು ಅನ್ನುವುದು ಸ್ಪಷ್ಟ. ಕೊರೋನಾ ಸೋಂಕು ತಡೆ ವಿಚಾರದಲ್ಲಿ ಉತ್ತಮ ಕೆಲಸ ಮಾಡಿರುವ ಸುಧಾಕರ್ ಈ ಹಿಂದೆಯೇ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಮಾತ್ರ ಸೀಟುಗಳನ್ನು ಭರ್ತಿ ಮಾಡೋಣ. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಬರಲಿದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸುಧಾಕರ್ ಸಲಹೆಯನ್ನು ಸಿಎಂ ಕಿವಿಗೆ ಹಾಕಿಕೊಂಡಿರಲಿಲ್ಲ.
ಕೊರೋನಾ ಸೋಂಕು ಹರಡುವಲ್ಲಿ ಚಿತ್ರಮಂದಿರಗಳು ಅದರಲ್ಲೂ ಮಲ್ಟಿಫ್ಲೆಕ್ಸ್ ಗಳ ಪಾತ್ರ ಮಹತ್ವದ್ದು, ಅಲ್ಲಿ ಬರುವವರ ನಿಗಾ ಇಡುವುದು ಸರ್ಕಾರಕ್ಕ ಸಾಧ್ಯವಿಲ್ಲ.
ಅಷ್ಟು ಮಾತ್ರವಲ್ಲದೆ ಕೊರೋನಾ ಸೋಂಕಿನ ಕುರಿತಂತೆ ಸುಧಾಕರ್ ಕೊಟ್ಟ ಎಚ್ಚರಿಕೆಯನ್ನು ಚಿತ್ರರಂಗದ ಸೆಲೆಬ್ರೆಟಿಗಳು ಗಣನೆಗೆ ತೆಗೆದುಕೊಂಡಿರಲಿಲ್ಲ. ಬಿಡುಗಡೆಯಾದ ಸಾಲು ಸಾಲು ಸಿನಿಮಾಗಳ ವಿಡಿಯೋ ತೆಗೆದು ನೋಡಿದ್ರೆ ಸಾಮಾಜಿಕ ಅಂತರ, ಮಾಸ್ಕ್ ಅನ್ನುವುದು ಇರಲೇ ಇಲ್ಲ. ಧ್ರುವ ಸರ್ಜಾ, ದರ್ಶನ್, ಪುನೀತ್ ರಾಜ್ ಕುಮಾರ್ ಅವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲಾದರೂ ಸಿನಿಮಾ ಪ್ರಚಾರ ನಡೆಸಿದ್ದಾರೆಯೇ.ಅನ್ನುವುದನ್ನು ನಾವು ನೋಡುವುದು ಬೆಟರ್.
ಅರೇ ರಾಜಕಾರಣಿಗಳಿಗೆ ಮಾಡಿಲ್ಲ ಎಂದು ಈ ವೇಳೆ ಪ್ರಶ್ನೆ ಕೇಳುವುದು ತಪ್ಪಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳಿಗಿಂತ ಚಲನಚಿತ್ರ ನಟರು ಸಮಾಜಕ್ಕೆ ರೋಲ್ ಮಾಡೆಲ್ ಗಳು ಅನ್ನುವುದು ಗಮನಾರ್ಹ ಅಂಶ
Discussion about this post