ಬೆಂಗಳೂರು : ಈಗಾಗಲೇ ಕೊರೋನಾ ಸೋಂಕು ತಗ್ಗಿರುವ ಹಿನ್ನಲೆಯಲ್ಲಿ ತರಗತಿಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಖುಷಿಯಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಜೊತೆಗೆ ತರಗತಿ ಪ್ರಾರಂಭಿಸುವ ವೇಳೆ ಇದ್ದ ಆತಂಕ ಕೂಡಾ ಕರಗಿದ್ದು, ಸಹಜ ಜೀವನಕ್ಕೆ ಮರಳುವ ವಿಶ್ವಾಸ ವ್ಯಕ್ತವಾಗಿದೆ.
ಈ ನಡುವೆ ದಸರಾ ನಂತರ 1 ರಿಂದ 5 ನೇ ತರಗತಿ ಪ್ರಾರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ದಸರಾ ಕಳೆಯುತ್ತಿದ್ದಂತೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆಗಳಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ದಸರಾ ನಂತರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡುತ್ತೇವೆ ಅಂದಿದ್ದಾರೆ. ಜೊತೆಗೆ 6 ರಿಂದ 12ನೇ ತರಗತಿತನಕ ಬೆಳಿಗ್ಗೆಯಿಂದ ಸಂಜೆವರೆಗೆ ಭೌತಿಕ ತರಗತಿ ನಡೆಸುವಂತೆ ಮೌಖಿಕ ಸೂಚನೆ ನೀಡಲಾಗಿದೆ.
ಹಾಗಂತ ಕಡ್ಡಾಯವಾಗಿ ವಿದ್ಯಾರ್ಥಿ ತರಗತಿಗೆ ಹಾಜರಾಗಬೇಕು ಎಂದು ಬಲವಂತ ಮಾಡಬಾರದು ಎಂದು ಸೂಚಿಸಿರುವ ಸಚಿವರು ಹಲವು ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಈ ಪ್ರಮಾಣ ಶೂನ್ಯಕ್ಕೆ ಬಂದಿದೆ. ಹೀಗಾಗಿ ತರಗತಿ ನಡೆಸಲು ತೊಂದರೆ ಇಲ್ಲ ಅಂದಿದ್ದಾರೆ.
The Karnataka government will take a decision on starting classes for students of standard 1 to 5 after the Dasara festival.Speaking to mediapersons in Chikkamagaluru on October 1, Minister for Primary and Secondary Education B.C. Nagesh said the response from students to offline classes for standard 6 and above had been impressive.
Discussion about this post