ಬೆಂಗಳೂರು : ಚಂದನವನದ ಡ್ರಗ್ಸ್ ದಂಧೆಯಲ್ಲಿ ಆರೋಪಿಯಾಗಿರುವ ನಟಿ ಸಂಜನಾ ಇದೀಗ ಜಾಮೀನು ಮೂಲಕ ಹೊರ ಬಂದಿದ್ದಾರೆ.
ಈ ನಡುವೆ ನಟಿ ಸಂಜನಾ ಅವರನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಎನ್.ಪಿ. ಅಮೃತೇಶ್ ಎಂಬವರು ಗೃಹ ಸಚಿವರು, ಕಾಟನ್ ಪೇಟೆ ಪೊಲೀಸ್ ಠಾಣೆ ಮತ್ತು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಅಮೃತೇಶ್ ನೀಡಿರುವ ದೂರಿನಲ್ಲಿ ಸಂಜನಾ ಗಲ್ರಾನಿ ಮೂಲ ಹೆಸರು ಅರ್ಚನಾ ಮನೋಹರ್ ಗಲ್ರಾನಿ ಎಂದಾಗಿದ್ದು, 2018ರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಮಹಿರಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಿಲಾಗಿದೆ.
ದೂರಿನಲ್ಲಿ ಸಂಜನಾಳನ್ನು ಮಹಿರಾ ಮಾಡಿದ ಟ್ಯಾನರಿ ರಸ್ತೆಯಲ್ಲಿರುವ ದಾರುಲ್ ಉಲುಮ್ ಶಾವಲಿಯುಲ್ಲಾ ಮಸೀದಿಯ ಮೌಲ್ವಿಯನ್ನು ಆರೋಪಿ ಎಂದು ಗುರುತಿಸಲಾಗಿದೆ,
Discussion about this post