ಬಿಗ್ ಬಾಸ್ ( Bigg Boss Kannada ) ಮನೆಯಲ್ಲಿ ಸಂಗೀತಾ ಶೃಂಗೇರಿಗೆ sangeetha sringeri ಅವಮಾನ
ಈ ಬಾರಿಯ ಬಿಗ್ ಬಾಸ್ ಸೀಸನ್ 10 ಅತ್ಯಂತ ಕಳಪೆಯಾಗಿದೆ. ಅದನ್ನು ಕಳಪೆಯಾಗಿಸಿದ ಕೀರ್ತಿ ಈ ಬಾರಿಯ ಸ್ಪರ್ಧಿಗಳಿಗೆ ಸಲ್ಲುತ್ತದೆ.ಅದರಲ್ಲೂ ಈ ಬಾರಿ ಮಹಾಮನೆ ಪ್ರವೇಶಿಸಿದ ಕೆಲ ಸೆಲೆಬ್ರೆಟಿಗಳು ಆ ಗೌರವಕ್ಕೆ ಆರ್ಹರಲ್ಲ ಅನ್ನೋದನ್ನೂ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ನೇಹಿತ್ ಅನ್ನುವ ಸ್ಪರ್ಧಿ ಇದೀಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರವಲ್ಲದೆ, ಸಂಗೀತಾ ಶೃಂಗೇರಿ ( sangeetha sringeri )ವಿಚಾರದಲ್ಲಿ ನಡೆದುಕೊಂಡ ರೀತಿ ಅಸಹ್ಯ ಹುಟ್ಟಿಸಿದೆ.
ಗೊಂಬೆಯಾಟವಯ್ಯ ಅನ್ನುವ ಟಾಸ್ಕ್ ನಲ್ಲಿ , ಸಂಗೀತಾ ಅವರ ಸಾಧನೆ ಬಗ್ಗೆ ತಿಳಿದುಕೊಳ್ಳದೆ ಸ್ನೇಹಿತ್ ಡ್ಯಾಮೇಜಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಖಾಸಗಿ ಬಸ್ ಮಾಲೀಕರಿಗೆ ಶರಣಾದ ಸಿದ್ದರಾಮಯ್ಯ ಸರ್ಕಾರ : Deepavali ಬರೆ
ನೀವು ಸೀರಿಯಸ್ ಅಥ್ಲೀಟ್ ಅಥವಾ ಸುಳ್ಳು ಹೇಳುತ್ತಿದ್ದೀರಾ, ಲೈಫ್ ನಲ್ಲಿ ಒಂದು ಸಲ ಸ್ಫೋರ್ಟ್ಸ್ ಆಡಿದ್ದರೆ ಸ್ಫೋಟ್ಸ್ ಮ್ಯಾನ್ ಶಿಪ್ ಹೇಗಿರುತ್ತದೆ ಎಂದು ಗೊತ್ತಿರೋದು ಅಂತಾ ಸ್ನೇಹಿತ್ ಸಂಗೀತಾ ಅವರ ಸಾಧನೆಯ ಬಗ್ಗೆಯೇ ಕುಹಕವಾಡಿದ್ದರು. ಈ ಮೂಲಕ ಸಂಗೀತಾ ಶೃಂಗೇರಿ ಅಥ್ಲೀಟ್ ಅಲ್ಲ ಅಂದಿದ್ದಾರೆ.
ಆದರೆ ಸಂಗೀತಾ ಶೃಂಗೇರಿ ಕೇವಲ ನಟಿಯಲ್ಲ, ಅವರು ನಟನೆಗಿಂತಲೂ ಆಥ್ಲೀಟ್ ರಂಗದಲ್ಲಿ ಹೆಸರು ಮಾಡಿದ ಪ್ರತಿಭೆ. ಪ್ರಮುಖವಾಗಿ ಸಂಗೀತಾ ಶೃಂಗೇರಿಯವರು ಎನ್ ಸಿ ಸಿ (NCC) ಕ್ಯಾಡೆಟ್ ಆಗಿದ್ದವರು. 2012ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಸಂಗೀತಾ ಖೋ ಖೋ ಆಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಶೃಂಗೇರಿ ಚಿನ್ನ ಗೆದ್ದು ತಂದಿದ್ದರು.
2014ರಲ್ಲಿ ಫೆಮಿನಾ ಮಿಸ್ ಇಂಡಿಯಾ ಬ್ಯೂಟಿ ಪೇಜೆಂಟ್ ನಲ್ಲಿ ಟಾಪ್ 10ನೇ ಸ್ಥಾನ ಪಡೆದಿದ್ದರು. ವರ್ಲ್ಚ್ ಸೂಪರ್ ಮಾಡಲ್ ಕಂಟೆಸ್ಟ್ ನಲ್ಲಿ ಸಂಗೀತಾ ಶೃಂಗೇರಿ ರನ್ನರ್ ಅಪ್ ಪ್ರಶಸ್ತಿ ಗಳಿಸಿದ್ದರು.
ಇನ್ನು ಸಂಗೀತಾ ಶೃಂಗೇರಿಯವರು ಕರ್ಮದಲ್ಲಿ ನಂಬಿಕೆ ಇಟ್ಟವರು. ಕೈಯಲ್ಲಿ ಒಂದು ರೂಪಾಯಿ ಇಲ್ಲದೆ ಮುಂಬೈ ರಸ್ತೆಯಲ್ಲಿ ಒಂಟಿಯಾಗಿ ನಿಂತ ವೇಳೆಯಲ್ಲೂ ವಿವಾದಗಳನ್ನು ಮಾಡದೆ ಮುಂದಿದೆ ಒಳ್ಳೆಯ ದಿನ ಎಂದು ಕಾದಿದ್ದರು. ಅದೇ ರೀತಿಯಲ್ಲಿ ಅವರು ಬೆಳೆದರು ಕೂಡಾ.
ಹಾಗೇ ನೋಡಿದ್ರೆ ಸಂಗೀತಾ ನಟಿಯಾಗುವ ಕನಸು ಕಂಡವರಲ್ಲ, ಏರ್ ಫೋರ್ಸ್ ಸೇರುವ ಕನಸು ಕಂಡಿದ್ದರು, ಆದರೆ ಹರ ಹರ ಮಹಾದೇವ ಧಾರಾವಾಹಿಯ ನಂತ್ರ ನಟಿಯಾಗಬೇಕು ಅನ್ನುವ ಹುಚ್ಚು ಹುಟ್ಟಿತ್ತು.
ಆದರೆ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಗೆ ಹೋಗುವ ಕುರಿತಂತೆ ಚಿತ್ತಾರ ಅನ್ನೋ ಯೂಟ್ಯೂಬ್ ಗೆ ಹಿಂದೊಮ್ಮೆ ಕೊಟ್ಟಿದ್ದ ಸಂದರ್ಶನದಲ್ಲಿ ಅದೆಷ್ಟು ಕೋಟಿ ಕೊಟ್ಟರೂ ಬಿಗ್ ಬಾಸ್ ಮನೆಗೆ ಹೋಗೋದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅದ್ಯಾಕೆ ಹೋದರೂ ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.
ಒಟ್ಟಿನಲ್ಲಿ ಸ್ನೇಹಿತ್ ಬಾಯಿ ಅದೆಷ್ಟು ಗಬ್ಬು ಅಂದ್ರೆ ಕೇವಲ ಸಂಗೀತಾ ಬಗ್ಗೆ ಮಾತ್ರವಲ್ಲ ತನಿಷಾ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದಿನ ಶನಿವಾರ ಕಿಚ್ಚ ಸುದೀಪ್ ಸ್ನೇಹಿತ್ ನನ್ನು ಫಿನಾಯಿಲ್ ಹಾಕಿ ತೊಳೆಯೋದು ಪಕ್ಕಾ.
Discussion about this post