ಶಾರೂಖ್ ಖಾನ್ ಪುತ್ರನ ಡ್ರಗ್ಸ್ ಪ್ರಕರಣ ಸಂದರ್ಭದಲ್ಲಿ ವಾಖಂಡೆ ( Sameer Wankhede) ವಿರುದ್ಧ ಖಾನ್ ಬೆಂಬಲಿಗರು ಎಗರಾಡಿದ್ದೇ ಎಗರಾಡಿದ್ದು
ಮುಂಬೈ : ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಸರ್ಕಾರಿ ನೌಕರಿ ಪಡೆದಿದ್ದಾರೆ ಅನ್ನುವ ಆರೋಪಕ್ಕೆ ತುತ್ತಾಗಿದ್ದ NCB ಅಧಿಕಾರಿ ಸಮೀರ್ ವಾಂಖೆಡೆ ( Sameer Wankhede) ಆರೋಪ ಮುಕ್ತರಾಗಿದ್ದಾರೆ. ಜಾತಿ ಪರಿಶೀಲನಾ ಸಮಿತಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದು, ಸಮೀರ್ ಮುಸ್ಲಿಂ ಅಲ್ಲ ಅಂದಿದೆ.
ಸಮೀರ್ ಹುಟ್ಟಿನಿಂದ ಮುಸ್ಲಿಂ ಅಲ್ಲ. ಅವರು ಮಹಾರ್ 37 ಪರಿಶಿಷ್ಟ ಜಾತಿಗೆ ಸೇರಿದವರು. ಸಮೀರ್ ವಾಂಖೆಡೆ ಮತ್ತು ಅವರ ತಂದೆ ಧ್ಯಾನೇಶ್ ವಾಂಖೆಡೆ ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಧರ್ಮ ಸ್ವೀಕರಿಸಿಲ್ಲ ಎಂದು ಸಮಿತಿ ಹೇಳಿದೆ.
ಇದನ್ನು ಓದಿ : Areca nut : ನೀವು ಅಡಿಕೆ ಕೃಷಿಕರೇ… ಕೃಷಿ ವಿಜ್ಞಾನಿಯ ಈ ಮಾತನ್ನು ಒಂದ್ಸಲ ಓದಿಕೊಳ್ಳಿ
ಖಾನ್ ಡ್ರಗ್ಸ್ ಪ್ರಕರಣ ಸಂದರ್ಭದಲ್ಲಿ ವಾಂಖೆಡೆಯನ್ನು ಹೇಗಾದರೂ ಸೋಲಿಸಬೇಕು ಎಂದು ಷಡ್ಯಂತ್ರ ನಡೆದಿತ್ತು. ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗಿತ್ತು. ದಕ್ಷ ಅಧಿಕಾರಿಯೊಬ್ಬನನ್ನು ಅವಮಾನಿಸಲಾಗಿತ್ತು.
ಅದರಲ್ಲೂ ಮಹಾರಾಷ್ಟ್ರದ ಮಾಜಿ ಕ್ಯಾಬಿನೆಟ್ ಸಚಿವ ಎನ್.ಸಿ.ಪಿ ಮುಖಂಡ ನವಾಬ್ ಮಲಿಕ್, ಸಮೀರ್ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ ಹೊರಿಸಿದ್ದರು. ನಂತರ ಮನೋಜ್ ಸಂಸಾರೆ, ಅಶೋಕ್ ಕಾಂಬ್ಳೆ ಸಮೀರ್ ವಾಖಂಡೆ ವಿರುದ್ಧ ದೂರು ನೀಡಿದ್ದರು.
ಈಗ ಎಲ್ಲಾ ಆರೋಪಗಳಿಂದ ಅವರು ಮುಕ್ತರಾಗಿದ್ದಾರೆ. ಈ ಮೂಲಕ ಖಾನ್ ಬೆಂಬಲಕ್ಕೆ ನಿಂತ ಮಂದಿ ತಲೆ ತಗ್ಗಿಸಿದ್ದಾರೆ.
Discussion about this post