ಸದಾನಂದಗೌಡ Sadananda Gowda ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪೋದು ಖಚಿತ ಅನ್ನಲಾಗಿದೆ
ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ಹಾಲಿ ಸಂಸದ ಡಿವಿ ಸದಾನಂದ ಗೌಡ ( Sadananda Gowda )ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಕೈ ತಪ್ಪಲಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖವೊಂದನ್ನು ಪರಿಚಯಿಸಲು ಬಿಜೆಪಿಯ ಡೆಲ್ಲಿ ನಾಯಕರು ಈಗಾಗಲೇ ಡಿಸೈಡ್ ಮಾಡಿದ್ದಾರೆ ಕೂಡಾ.
ಈ ನಡುವೆ ಡೆಲ್ಲಿ ವರಿಷ್ಠರ ವಿಳಂಭ ಧೋರಣೆ ಬಗ್ಗೆ ಬಹಿರಂಗವಾಗಿಯೇ ಅಸಮಾಧನ ಹೊರ ಹಾಕಲಾರಂಭಿಸಿರುವ ಸದಾನಂದಗೌಡರು ( Sadananda Gowda ) ಇತ್ತೀಚೆಗೆ ಜೆಡಿಎಸ್ ಮೈತ್ರಿ ಬಗ್ಗೆಯೂ ಅಪಸ್ವರ ಎತ್ತಿದ್ದರು. ರಾಜ್ಯ ನಾಯಕರೊಂದಿಗೆ ಚರ್ಚಿಸದೆ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬಾರದಿತ್ತು ಅನ್ನೋದು ಅವರ ಅಭಿಪ್ರಾಯವಾಗಿತ್ತು. ಇದರೊಂದಿಗೆ ಪ್ರತಿಪಕ್ಷ ನಾಯಕನ ನೇಮಕ ವಿಳಂಭವಾಗುತ್ತಿರುವ ಬಗ್ಗೆಯೂ ಡಿವಿಎಸ್ ಬೇಸರ ಹೊಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ವರಿಷ್ಠರ ಭೇಟಿ ಸಲುವಾಗಿ ಬೆಂಗಳೂರಿನಿಂದ ದೆಹಲಿ ವಿಮಾನ ಹತ್ತಿದ್ದ ಸದಾನಂದಗೌಡರು ಇದೀಗ ವರಿಷ್ಠರು ಸಿಗದೆ ಬರೀಗೈಯಲ್ಲಿ ಬೆಂಗಳೂರಿಗೆ ಮರಳಿದ್ದಾರೆ. ಸದಾನಂದಗೌಡರು ದೆಹಲಿಗೆ ಹೋಗುವಾಗ ಅವರೇ ಮತ್ತೆ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಬಿಂಬಿಸಲಾಗಿತ್ತು ಕೂಡಾ. ಅವರು ದೆಹಲಿಗೆ ತೆರಳುವ ಮುನ್ನ ವರಿಷ್ಠರೇ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದೆಹಲಿ ಮೂಲದ ಪ್ರಕಾರ ಸದಾನಂದಗೌಡ ಅವರೇ ಖುದ್ದಾಘಿ ದೆಹಲಿಗೆ ತೆರಳಿಗೆ ವರಿಷ್ಠರಿಗೆ ಹಲವು ವಿಷಯಗಳ ಕುರಿತಂತೆ ಮನವರಿಕೆ ಮಾಡಲು ಮುಂದಾಗಿದ್ರಂತೆ.
Read this : ಗೃಹಲಕ್ಷ್ಮೀ Gruha Lakshmi ಯೋಜನೆ ಬಗ್ಗೆ ಸಿದ್ದರಾಮಯ್ಯನವರೇ ಆಸಕ್ತಿ ಕಳೆದುಕೊಂಡ್ರ…?
ದೆಹಲಿಯಲ್ಲಿ ಮೂರು ದಿನಗಳ ಕಾಲ ವರಿಷ್ಠರ ಭೇಟಿಗೆ ಪ್ರಯತ್ನಿಸಿದರೂ, ಭೇಟಿ ಸಾಧ್ಯವಾಗಿಲ್ಲ. ಪಂಚ ರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ವರಿಷ್ಠರು ಬ್ಯುಸಿಯಾಗಿದ್ದು, ಸದಾನಂದ ಗೌಡರ ದೆಹಲಿ ಯಾತ್ರೆ ಬಂದ ದಾರಿಗೆ ಸುಂಕವಿಲ್ಲ ಅನ್ನುವಂತಾಗಿದೆ. ಜೆಪಿ ನಡ್ಡಾ ಅವರನ್ನು ಭೇಟಿಯಾಗಬೇಕು ಎಂದು ಹೋದ ಡಿವಿಎಸ್ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಮರಳಿದ್ದಾರೆ.
ಇನ್ನು ತಮ್ಮ ದೆಹಲಿ ಪ್ರವಾಸ ಕುರಿತಂತೆ ಮಾತನಾಡಿರುವ ಸದಾನಂದಗೌಡರು, ವರಿಷ್ಠರ ಭೇಟಿ ಸಾಧ್ಯವಾಗದಿರುವ ಬಗ್ಗೆ ನನಗೆ ಬೇಸರವಿಲ್ಲ ಅಂದಿದ್ದಾರೆ.
Discussion about this post