ನಿಗದಿಪಡಿಸಿದ ಗಡುವಿನಲ್ಲೇ ಅಫ್ಘಾನಿಸ್ತಾನವನ್ನು ಅಮೆರಿಕಾ ಸೇನೆ ತೊರೆದಿದ್ದು, ಈ ಮೂಲಕ ಇದೀಗ ಒಂದು ಕಾಲದ ಶಾಂತಿಯ ನೆಲ ರಾಕ್ಷಸರ ಕೈ ವಶವಾಗಿದೆ. ಅಮೆರಿಕಾ ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಂಡಿರುವುದನ್ನು ಘೋಷಿಸಿದ ಬೆನ್ನಲ್ಲೇ ತಾಲಿಬಾನ್ ಗಳು ಸಂಭ್ರಮಾಚರಣೆ ಗೈದಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.
ಈ ಮೂಲಕ ಸರಿ ಸುಮಾರು 20 ವರ್ಷಗಳ ಕಾಲ ಅಫ್ಘಾನ್ ನೆಲದಲ್ಲಿ ಅಮೆರಿಕಾ ಉಗ್ರರ ವಿರುದ್ಧ ನಡೆಸಿದ ಸುದೀರ್ಘ ಕಾರ್ಯಾಚರಣೆಯೊಂದು ವಿಫಲವಾಗಿದೆ. 20 ವರ್ಷಗಳ ಹಿಂದೆ ಉಗ್ರರ ಕೈಯಲ್ಲಿದ್ದ ಅಫ್ಘಾನ್ ಗೆ ಅಮೆರಿಕಾ ಸೇನೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಪ್ರಜಾಪ್ರಭುತ್ವ ಸರ್ಕಾರ ನೆಲೆಯೂರಿತ್ತು. ಇದೀಗ ಅಮೆರಿಕಾ ಸೇನೆ ಜಾಗ ಖಾಲಿ ಮಾಡುತ್ತಿದ್ದಂತೆ ಧರ್ಮಾಂಧರು ಅಧಿಕಾರವನ್ನು ಕೈ ವಶ ಮಾಡಿಕೊಂಡಿದ್ದಾರೆ.
ಹಾಗೇ ನೋಡಿದರೆ ಅಫ್ಘಾನ್ ನಲ್ಲಿ ರಚನೆಯಾದ ಪ್ರಜಾಪ್ರಭುತ್ವ ಸರ್ಕಾರ, ಉಗ್ರರ ವಿರುದ್ದ ಸಮರ್ಥವಾಗಿ ಹೋರಾಟ ನಡೆಸಬಹುದಾಗಿತ್ತು. ಅಮೆರಿಕಾ, ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ನೀಡಿದ ಸಹಾಯ ಹಸ್ತವನ್ನು ಬಳಸಿ ಬೆಳೆಯಬಹುದಿತ್ತು. ಆದರೆ ಭ್ರಷ್ಟಚಾರ, ಅಧಿಕಾರ ದಾಹ, ದೇಶ ಪ್ರೇಮದ ಕೊರತೆಯ ಕಾರಣದಿಂದ ಅದು ಸಾಧ್ಯವಾಗಲಿಲ್ಲ.
Discussion about this post