ಮಾಲ್ಡೀವ್ಸ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮಾಲ್ಡೀವ್ಸ್ ಪ್ರಮುಖ ಪಾಲುದಾರ ದೇಶವಾಗಿರುವ ಕಾರಣ, ಭಾರತ ಹಾಗೂ ಮಾಲ್ಡೀವ್ಸ್ ನಡುವಣ ಸಹಕಾರ ಸಾಂಪ್ರದಾಯಿಕ ಪಾತ್ರವನ್ನು ಮೀರಿ ಸಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಅಡ್ಡು ಪುನಶ್ಚೇತನ, ಅಡ್ಡು ದಂಡೆ ಸಂರಕ್ಷಣಾ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಅಭಿವೃದ್ಧಿ ಸಹಕಾರ ಮಾಲ್ಡೀವ್ಸ್ ಜನರ ಜೀವನದ ಎಲ್ಲಾ ಹಂತಗಳನ್ನು ತಲುಪುವ ಹಾಗೂ ಅವರಿಗೆ ಸ್ಪಷ್ಟ ಪ್ರಯೋಜನಗಳನ್ನು ಕಲ್ಪಿಸಿಕೊಡುವ ಗುರಿಯನ್ನು ಹೊಂದಿದೆ ಎಂದು ವಿವರಿಸಿದರು.
ಅಡ್ಡುವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸುಸ್ಥಿರ ಮಾರ್ಗವನ್ನು ಕಂಡುಕೊಳ್ಳಲು ಈ ಯೋಜನೆಗಳು ಭಾರತ- ಮಾಲ್ಡೀವ್ಸ್ ಸರಕಾರದೊಂದಿಗೆ ಪಾಲುದಾರಿಕೆ ಹೊಂದಿದೆ ಎಂದರು.
80 ದಶಲಕ್ಷ ಡಾಲರ್ ವೆಚ್ಚದ ಈ ಮಹಾತ್ವಾಕಾಂಕ್ಷೆ ಕಾರ್ಯಕ್ರಮ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶ ಹಾಗೂ ಒಟ್ಟಾರೆ ಅಡ್ಡು ಪ್ರದೇಶದ ಆರ್ಥಿಕ ಅಭಿವೃದ್ಧಿಗಾಗಿ ಪುನಶ್ಚೇತನ ಒಳಗೊಂಡಿರುತ್ತದೆ ಎಂದು ಜೈಶಂಕರ್ ಹೇಳಿದರು.
ಕಳೆದ 5 ವರ್ಷಗಳಲ್ಲಿ ಭಾರತ ಅಡ್ಡುವಿನಲ್ಲಿ 220 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಮಾಲ್ಡೀವ್ಸ್ ನ ಪ್ರಾದೇಶಿಕ ಅಭಿವೃದ್ಧಿಗೆ ಭಾರತ ನೀಡಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ ಎಂದು ವಿವರಿಸಿದರು.