ಹಾಸನ : ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ವಿರುದ್ಧ ಸಮರದ ಭಾಗವಾಗಿ ಇದೇ ಭಾನುವಾರ 5 ರಂದು ವಿದ್ಯುತ್ ದೀಪಗಳನ್ನು ಆರಿಸಿ, ಮನೆಯ ಬಾಲ್ಕನಿಯಲ್ಲಿ ದೀಪ ಉರಿಸಿ ಅಂದಿದ್ದಾರೆ. ಕ್ಯಾಂಡಲ್, ಮೊಬೈಲ್ ಟಾರ್ಚ್ ಗಳಾದರೂ ಪರವಾಗಿಲ್ಲ ಅಂದಿದ್ದಾರೆ.
ಲಾಕ್ ಡೌನ್ ನಿಂದ ಮನೆಯಲ್ಲಿ ಕೂತು ಕಂಗೆಟ್ಟ ಮನಸ್ಸುಗಳಲ್ಲಿ ಹೊಸ ಚೈತನ್ಯ ಮೂಡಿಸುವುದು ಇದರ ಉದ್ದೇಶ.
ಇನ್ನು ಭಾರತೀಯರ ನಂಬಿಕೆಗಳ ಪ್ರಕಾರ ದೀಪಕ್ಕೆ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ಧರ್ಮವೂ ದೀಪಕ್ಕೆ ತನ್ನದೇ ಆದ ಸ್ಥಾನ ಮಾನವನ್ನು ಕೊಟ್ಟಿದೆ.
ಇನ್ನು ಕೊರೋನಾ ಪೀಡಿತ ಇಟಲಿಯಲ್ಲೂ ದೀಪ ಬೆಳಗುವ ಹೊಸ ಕಾರ್ಯಕ್ರಮವೊಂದು ಹಲವು ದಿನಗಳಿಂದ ನಡೆಯುತ್ತಿದೆ.
ಆದರೆ ಮೋದಿಯವರು ಹೇಳಿದ್ದನ್ನು ಟೀಕಿಸಲೇಬೇಕು ಎಂದು ಪಟ್ಟು ಹಿಡಿದವರು, ಅಥವಾ ನಾನು ಹುಟ್ಟಿದ್ದೇ ಮೋದಿಯನ್ನು ಟೀಕಿಸಲೆಂದು ಅನ್ನುವವರು ದೀಪ ಬೆಳಗುವ ಕಾನ್ಸೆಪ್ಟ್ ಅನ್ನು ಟೀಕಿಸಿದ್ದಾರೆ.
ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ರೇವಣ್ಣ ಕೂಡಾ ಹೊರತಲ್ಲ. ಮೋದಿ ಹೇಳ್ತಾರೆ ಏಪ್ರಿಲ್ 5ರಂದು ಮೇಣದ ಬತ್ತಿ ಹಚ್ಚಿ ಎಂದು. ಎಲ್ಲಾ ಕಡೆ ಲಾಕ್ ಡೌನ್ ಆಗಿದೆ. ಮೇಣದಬತ್ತಿ ತರೋಕೆ ಮನೆಯಿಂದ ಹೊರಗೆ ಹೋದ್ರೆ ಏಟು ಬೀಳುತ್ತದೆ. ಹಾಗಾಗಿ ಮೇಣದ ಬತ್ತಿ ಎಲ್ಲಿಂದ ತರೋಣ ಎಂದು ರೇವಣ್ಣ ಟೀಕಿಸಿದ್ದಾರೆ.
Discussion about this post