ದಾವಣಗೆರೆ : ಕೋವಿಡ್ ಕೇರ್ ಸೆಂಟರ್ ನಲ್ಲಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುವವರ ಆಕ್ರೋಶಕ್ಕೆ ಕಾರಣವಾಗಿದೆ.
ಸುದ್ದಿ ತಿಳಿದ ಬೆನ್ನಲ್ಲೇ ಶುಕ್ರವಾರ ಕೇರ್ ಸೆಂಟರ್ ನಿಂದ ಹೊರಗೆ ಬಂದ ಸೋಂಕಿತರು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಶಾಸಕರು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನಾವೇ ಅವರ ಕೆಲಸ ಬಗ್ಗೆ ದೂರು ಕೊಟ್ಟಿಲ್ಲ ಅಂದ ಮೇಲೆ ಅದು ಹೇಗೆ ಕೇಸ್ ಹಾಕ್ತೀರಾ ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಸ್ಥಳಕ್ಕೆ ಬಾರದ ಹೊರತು ರಾತ್ರಿ ಆಹಾರ ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೇಣುಕಾಚಾರ್ಯ ಅವರೆಲ್ಲರನ್ನೂ ಸಮಾಧಾನ ಪಡಿಸಿದರು.
ಮಾಜಿ ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಹೀಗೆ ವರ್ತಿಸುತ್ತಿದ್ದಾರೆ. ನಾನು ಎರಡು ಸಲ ಜೈಲಿಗೆ ಹೋಗಿ ಬಂದವನು, ಮತ್ತೆ ಜೈಲಿಗೆ ಹೋಗಲು ಸಿದ್ದನಾಗಿದ್ದೇನೆ. ಕೇಸ್ ಹಾಕ್ತೀರಾ ಹಾಕಿಕೊಳ್ಳಲಿ ಯಾರೂ ತಲೆ ಕೆಡಿಸಿಕೊಳ್ಳುವುದು ಬೇಡ.
ನನ್ನ ಜನಸೇವೆಯನ್ನು ಸಹಿಸದ ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಮಣಿಯುವುದಿಲ್ಲ, ನಾನು ಬದುಕಿದರು ಜನರ ಜೊತೆಯಲ್ಲಿ ಬದುಕುತ್ತೇನೆ, ಸತ್ತರೂ ಜನರ ಜೊತೆಯಲ್ಲೇ ಸಾಯುತ್ತೇನೆ ಅಂದರು.
ಇಂದು ಮುಂಜಾನೆ ಮತ್ತೆ ಅದೇ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು ಸೋಂಕಿತರೊಂದಿಗೆ ಕ್ರಿಕೆಟ್ ಆಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.
Discussion about this post