ಬೆಂಗಳೂರು : ಕುಮಾರಸ್ವಾಮಿ ಕೆಲಸದ ಬಗ್ಗೆ ರಾಜ್ಯದ ಜನತೆಗೊಂದು ಗೌರವವಿದೆ. ಜೊತೆಗೆ ಒಂದ್ಸಲ ಕುಮಾರಸ್ವಾಮಿ ಸಿಎಂ ಆಗಬೇಕು ಅನ್ನುವ ಮಾತುಗಳು ಕೂಡಾ ಇದೆ. ಆದರೆ ಕುಮಾರಸ್ವಾಮಿಯ ನಡೆ ಹಾಗೂ ನುಡಿಯೇ ಅವರನ್ನು ಸ್ವಂತ ಸಾಮರ್ಥ್ಯದಿಂದ ಸಿಎಂ ಆಗದಂತೆ ತಡೆಯುತ್ತಿದೆ.
ಇದೀಗ ಕೆ ಆರ್ ಎಸ್ ಡ್ಯಾಮ್ ಬಿರುಕಿನ ವಿಚಾರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಟಾರ್ಗೇಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಸುಮಲತಾ ವಿರುದ್ಧ ಆಡಿಯೋ ವಿಡಿಯೋ ಇದೆ.ಅದನ್ನು ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತೇನೆ ಅನ್ನುವ ಮೂಲಕ ವಿಶ್ವಾಸರ್ಹತೆಯ ಪ್ರಶ್ನೆಯನ್ನು ಮೂಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಡಿಯೋ ವಿಡಿಯೋ ಬಿಡುಗಡೆ ಮಾಡ್ತೀನಿ ಅನ್ನುವುದಾದ್ರೆ ಅದು ಪಕ್ಕಾ ರಾಜಕೀಯ ಲಾಭದ ಉದ್ದೇಶ ಅನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ಕನ್ನಂಬಾಡಿ ಕಟ್ಟೆಯ ಬಿರುಕಿಗೆ ಸುಮಲತಾ ಅವರನ್ನು ಮಲಗಿಸಬೇಕು ಅನ್ನುವ ಮೂಲಕ ಮತ್ತೊಂದು ಯಡವಟ್ಟು ಹೇಳಿಕೆಯನ್ನು ಕುಮಾರಸ್ವಾಮಿ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಎರಡು ಹೇಳಿಕೆಗಳು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಯನ್ನು ತಂದೊಡ್ಡುವುದರಲ್ಲಿ ಸಂಶಯವಿಲ್ಲ.
ಇನ್ನು ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಿಡಿ ಕಾರಿರುವ, ಸುಮಲತಾ ಅಂಬರೀಶ್, ಕುಮಾರಸ್ವಾಮಿಯವರು ಬೆಳೆಸಿಕೊಂಡು ಬಂದಿರುವ ಸಂಸ್ಕಾರವೇನು ಅನ್ನುವುದನ್ನು ಅವರ ಮಾತುಗಳು ತೋರಿಸುತ್ತದೆ. ಮಹಿಳೆಯರು, ಹೆಣ್ಣು ಮಕ್ಕಳ ಬಗ್ಗೆ ಕೇವಲ, ಹಗುರವಾಗಿ ಮಾತನಾಡುವುದನ್ನು ನೋಡಿದರೆ, ಅವರ ಭಾವನೆಗಳು ಏನು ಅನ್ನುವುದನ್ನು ಸ್ಪಷ್ವವಾಗುತ್ತದೆ ಅಂದಿದ್ದಾರೆ.ಜೊತೆಗೆ ಕುಮಾರಸ್ವಾಮಿ ಕ್ಷಮೆಗೂ ಸುಮಲತಾ ಆಗ್ರಹಿಸಿದ್ದಾರೆ.
Discussion about this post