ಇತ್ತೀಚೆಗಷ್ಟೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಖ್ಯಾತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಸಿಂಗಂ ಖ್ಯಾತಿಯ ಮತ್ತೊಬ್ಬ ಖಡಕ್ ಅಧಿಕಾರಿ ರವಿ ಚನ್ನಣ್ಣನವರ್ ಅವರು ಭಾವುಕ ಪತ್ರ ಬರೆದಿದ್ದಾರೆ. ರವಿ ಚನ್ನಣ್ಣನವರ್ ಹಾಗೂ ಅಣ್ಣಾಮಲೈ ಅವರು ಪರಸ್ಪರ ಆತ್ಮೀಯ ಗೆಳೆಯರು ಆಗಿದ್ದಾರೆ. ಇಂದು ಅಣ್ಣಾಮಲೈ ಅವರ ಹುಟ್ಟುಹಬ್ಬ ಹಾಗಾಗಿ ರವಿ ಚನ್ನಣ್ಣನವರ್ ಅವರು ಗೆಳೆಯನಿಗೆ ಭಾವುಕ ಪತ್ರ ಬರೆದಿದ್ದಾರೆ.
ಇಬ್ಬರೂ ಒಟ್ಟಿಗೆ ಕಳೆದ ದಿನಗಳನ್ನೂ ಮೆಲುಕು ಹಾಕಿರುವ ರವಿ ಚನ್ನಣ್ಣನವರ್ ಅವರು, ‘ನನ್ನಂಥವರು ಎಷ್ಟೋ ಮಂದಿ ಸೇರಿ ಒಬ್ಬ ಅಣ್ಣಾಮಲೈ ಆಗುತ್ತಾರೆ’ ಎಂದು ಮನಃಪೂರ್ವಕವಾಗಿ ಹೊಗಳಿದ್ದಾರೆ. ಅಣ್ಣಾಮಲೈ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸತತವಾಗಿ ಚಿಂತಿಸಿದ್ದಾಗಿ ರವಿ ಚೆನ್ನಣ್ಣನವರ್ ಅವರು ಹೇಳಿದ್ದಾರೆ.
ಅಣ್ಣಾಮಲೈ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದಾಗಿಯೂ ಸಹ ರವಿ ಚನ್ನಣ್ಣನವರ್ ಅವರು ಪತ್ರದಲ್ಲಿ ಬರೆದಿದ್ದಾರೆ. ರವಿ ಚನ್ನಣ್ಣನವರ್ ಅವರು ಹಾಸನದಲ್ಲಿ ಎಸ್ಪಿ ಆಗಿದ್ದಾಗ, ಎಎಸ್ಪಿ ಆಗಿ ಕೆಲಸ ಮಾಡಲು ಅಣ್ಣಾಮಲೈ ಅವರು ಬೇಕೆಂದು ಕೇಳಿದ್ದಾಗಿ ರವಿ ಚನ್ನಣ್ಣನವರ್ ಹೇಳಿದ್ದಾರೆ. ಬೆಂಗಳೂರಿಗೆ ವರ್ಗವಾಗಿ ಬಂದ ನಂತರ ಹಲವು ವಿಷಯಗಳಲ್ಲಿ ಪರಸ್ಪರ ಸಂವಾದ, ಚರ್ಚೆ, ಸಮಾಲೋಚನೆ ಮಾಡಿದ್ದು ನೆನಪಿನಲ್ಲಿ ಉಳಿಯುತ್ತದೆ ಎಂದು ಚನ್ನಣ್ಣನವರ್ ಹೇಳಿದ್ದಾರೆ.
ರವಿಯವರು ಬರೆದ ಪತ್ರದ ಪ್ರತಿಯನ್ನು ನಾವು ನಿಮಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
Discussion about this post