ಕನ್ನಡತಿ ಧಾರವಾಹಿಯ ಸಾನಿಯಾ ಪಾತ್ರಕ್ಕೊಂದು ತೂಕ ತಂದು ಕೊಟ್ಟ ರಮೋಲಾರ ಬಣ್ಣದ ಬದುಕಿನ ಜರ್ನಿ ಅಷ್ಟೇನೂ ಸುಲಭವಾಗಿರಲಿಲ್ಲ. ನಟಿಯಾಗಬೇಕು ಎಂದು ಚಂದನವನಕ್ಕೆ ಬಂದವರಿಗೆ ಮೂರು ಸಿನಿಮಾಗಳಲ್ಲಿ ಅವಕಾಶ ಸಿಕ್ತು. ಎಲ್ಲವೂ ನಾಯಕಿಯ ಪಾತ್ರ.
ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರಲು ಇನ್ನೇನು ಬೇಕು ಅಂದುಕೊಂಡರೆ ಮೂರೂ ಸಿನಿಮಾಗಳಿಗೂ ಬಿಡುಗಡೆ ಭಾಗ್ಯವೇ ಸಿಗಲಿಲ್ಲ. ಹೀಗಾಗಿ ಬೇಸರಿಸಿಕೊಂಡಿದ್ದ ರಮೋಲಾ ಅವರ ಕೈ ಹಿಡಿದದ್ದು ಕನ್ನಡತಿ. ಸಿಕ್ಕಿದ್ದು ವಿಲನ್ ಪಾತ್ರವಾದರೂ ಕನ್ನಡಿಗರು ಗುರುತಿಸುವ ಪಾತ್ರವಾಗಿತ್ತು. ಮಾತ್ರವಲ್ಲದೆ ವಿಲನ್ ಅಂದ್ರೆ ಅಬ್ಬರಿಸಿ ಬೊಬ್ಬಿರಿದು ಸದ್ದು ಮಾಡಬೇಕು ಅನ್ನುವ ಅಲಿಖಿತ ನಿಯಮವನ್ನು ಮುರಿದ ಹಿರಿಮೆಯೂ ರಮೋಲಾ ಅವರದ್ದು.
ಈ ನಡುವೆ ತಮಗೊಂದು ಬ್ರೇಕ್ ಕೊಟ್ಟ ಕನ್ನಡತಿ ಧಾರವಾಹಿಯನ್ನು ವೈಯುಕ್ತಿಕ ಕಾರಣ ಕೊಟ್ಟು ತೊರೆದಿರುವ ರಮೋಲಾ ಅಚ್ಚರಿ ಮೂಡಿಸಿದ್ದಾರೆ.
ಹಾಗಂತ ವೈಯುಕ್ತಿಕ ಕಾರಣಗಳಿಗಾಗಿ ರಮೋಲಾ ಧಾರವಾಹಿ ಬಿಟ್ಟಿಲ್ಲ. ಬದಲಾಗಿ ತೆಲುಗು ಕಿರುತೆರೆಯಿಂದ ಭರ್ಜರಿ ಆಫರ್ ರಮೋಲಾ ಅವರಿಗೆ ಬಂದಿದ್ದು ಆ ಕಾರಣಕ್ಕಾಗಿ ರಮೋಲಾ ಕನ್ನಡತಿ ಟೀಂ ತೊರೆದಿದ್ದಾರೆ.
ಮಾಹಿತಿಗಳ ಪ್ರಕಾರ ರಮೋಲಾ ತೆಲುಗು ಧಾರವಾಹಿಯಲ್ಲಿ ನಾಯಕಿ ಪಾತ್ರವೊಂದು ಅವರಿಗೆ ಸಿದ್ದವಾಗಿದೆಯಂತೆ. ಈ ಧಾರವಾಹಿ ಕನ್ನಡಕ್ಕೂ ಡಬ್ ಆಗೋ ಸಾಧ್ಯತೆಗಳಿದೆ ಅನ್ನಲಾಗಿದೆ.
Discussion about this post