ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ.
ರಮೇಶ್ ಜಾರಕಿಹೊಳಿ ಆರೋಪಿಸಿದ ಮಹಾನಾಯಕ ಯಾರು ಅನ್ನುವ ವಿವರಗಳು ಇನ್ನೂ ಕೆಲವೇ ದಿನದಲ್ಲಿ ಬಹಿರಂಗಗೊಂಡರೂ ಅಚ್ಚರಿ ಇಲ್ಲ. ಈ ನಡುವೆ ರಮೇಶ್ ಜಾರಕಿಹೊಳಿ ಇಂದು ಹೇಳಿದಂತೆ ಆಟ ಪ್ರಾರಂಭವಾಗಿದೆ.
ಸಿಡಿ ಲೇಡಿ ಪರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಸಿಡಿ ಲೇಡಿಯ ಫೋನ್ ಕಾಲ್ ಆಡಿಯೋ ಬಿಡುಗಡೆಯಾಗಿದೆ.
ತನ್ನ ಸಹೋದರನ ಜೊತೆ ಆಕೆ ಮಾತನಾಡಿರುವ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಹೆಸರನ್ನು ಸಂತ್ರಸ್ಥೆ ಮೂರು ಬಾರಿ ಪ್ರಸ್ತಾಪಿಸಿದ್ದಾಳೆ. ಒಂದು ವೇಳೆ ಅದು ಸಂತ್ರಸ್ಥೆಯ ಆಡಿಯೋವೇ ಆಗಿದ್ರೆ, ಡಿಕೆ ಶಿವಕುಮಾರ್ ಸಿಡಿ ಪ್ರಕರಣದಲ್ಲಿ ಡಿಕೆಶಿ ನೆರಳು ಖಂಡಿತಾ ಸ್ಪಷ್ಟವಾಗುತ್ತದೆ.
ಆದರೆ ಡಿಕೆಶಿ ಹೇಳಿದಂತೆ ಇಡೀ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸಿಲುಕಿಸುವ ಪ್ರಯತ್ನವೊಂದು ನಡೆಯುತ್ತಿದೆ ಅನ್ನುವುದು ಸ್ಪಷ್ಟ. ಇಲ್ಲವಾಗಿದ್ರೆ ಈ ಆಡಿಯೋ ಬಿಡುಗಡೆಯಾಗುವ ಅಗತ್ಯವೇ ಇರಲಿಲ್ಲ.
ಆದರೆ ಈ ಆಡಿಯೋ ಎಲ್ಲಿಂದ ಬಂದು ಅನ್ನುವುದೇ ಯಕ್ಷ ಪ್ರಶ್ನೆ. ಸಂತ್ರಸ್ಥೆಯ ಸಹೋದರನೇ ಇದನ್ನು ರೆಕಾರ್ಡ್ ಮಾಡಿದ್ದೇ ಆಗಿದ್ರೆ ಅದನ್ನು ಆತ ಯಾರಿಗೆ ಕೊಟ್ಟಿರಬಹುದು. ಕೊಟ್ಟಿದ್ರೆ ಎಸ್ಐಟಿ ಅಧಿಕಾರಿಗಳಿಗೆ ಕೊಟ್ಟಿರಬೇಕು, ಇಲ್ಲವಾಗಿದ್ರೆ ಜಾರಕಿಹೊಳಿ ಪರವಾಗಿದ್ದವರಿಗೆ ಕೊಟ್ಟಿರಬೇಕು.
ಅದು ಇಲ್ಲ ಅನ್ನುವುದಾಗಿದ್ದರೆ ಜಾರಕಿಹೊಳಿ ಸಹೋದರರು ನೇಮಿಸಿರುವ ಖಾಸಗಿ ತನಿಖಾ ಸಂಸ್ಥೆಗಳು ಆಡಿಯೋವನ್ನು ಕಲೆಕ್ಟ್ ಮಾಡಿರಬೇಕು. ಈ ಆಡಿಯೋ ಎಲ್ಲಿಂದ ಲೀಕ್ ಆಯ್ತು ಅನ್ನುವುದನ್ನು ಪತ್ತೆ ಹಚ್ಚಿದರೆ ಕಾಮಲೀಲೆಯ ಇಡೀ ಪ್ರಕರಣದ ಸ್ಪಷ್ಟ ಚಿತ್ರಣ ದೊರೆಯುತ್ತದೆ.
ಆದರೆ ಬಿಜೆಪಿಯ ಟ್ವೀಟ್, ರಮೇಶ್ ಜಾರಕಿಹೊಳಿ ಹೇಳಿಕೆ, ಡಿಕೆ ಶಿವಕುಮಾರ್ ವ್ಯಕ್ತಪಡಿಸಿರುವ ಆತಂಕಗಳನ್ನು ಗಮನಿಸಿದ್ರೆ ಕನಕಪುರ ಬಂಡೆ ಬುಡಕ್ಕೆ ಡೈನಾಮೇಟ್ ಇಡೋ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ ಅನ್ನುವುದು ಸ್ಪಷ್ಟ.
Discussion about this post