ಕಿರುತೆರೆಯ ಲಕ್ಕಿ ನಿರ್ದೇಶಕ ಎಂದು ಕರೆಸಿಕೊಂಡಿರುವ ರಾಮ್ ಜೀ ಮತ್ತೊಂದು ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ರಾಮ್ ಜೀ ಸಾಗುವ ವೇಗ ನೋಡಿದರೆ ಏಕ್ತಾ ಕಪೂರ್ ನೆನಪಾಗುತ್ತಿದ್ದಾರೆ.
ಯಾಕಂದ್ರೆ ರಾಮ್ ಜೀ ಮತ್ತೊಂದು ಮೆಘಾ ಪ್ರಾಜೆಕ್ಟ್ ಗೆ ಕೈ ಹಾಕಿದ್ದು, ರಾಮಾಚಾರಿ ಹೆಸರಿನಲ್ಲಿ ಧಾರವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಮಾಚಾರಿ ಅಂದ್ರೆ ವಿಷ್ಣು ವರ್ಧನ್, ರವಿಚಂದ್ರನ್ ಯಶ್ ನೆನಪಾಗ್ತಾರೆ.
ಅಂದ ಹಾಗೇ ಈ ರಾಮಾಚಾರಿ ಧಾರವಾಹಿಗೆ ನಾಯಕನಾಗಿ ಆಯ್ಕೆಯಾಗಿರುವುದು ರಿತ್ವಿಕ್ ಕೃಪಾಕರ್. ರಿತ್ವಿಕ್ ಗೆ ಇಂದು ಕಿರುತೆರೆಯ ಚೊಚ್ಚಲ ಪ್ರಾಜೆಕ್ಟ್.
ಈ ರಿತ್ವಿಕ್ ಗೆ ಕಲೆ ಅನ್ನುವುದು ರಕ್ತದಲ್ಲೇ ಬಂದಿದೆ. ಇವರ ತಂದೆ ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ ತಲೆದಂಡವನ್ನು ನಿರ್ದೇಶಿಸಿದ್ದರು. ಇನ್ನು ರಂಗಭೂಮಿಯಲ್ಲಿ ಕಳೆದ 10 ವರ್ಷಗಳಿಂದ ತೊಡಿಗಿಸಿಕೊಂಡಿರುವ ರಿತ್ವಿಕ್ ಮಂಡ್ಯ ರಮೇಶ್ ಅವರ ನಟನಾ ತಂಡದಲ್ಲಿ ಸಕ್ರಿಯರಾಗಿದ್ದಾರೆ.
Discussion about this post